“ನೀನೆಂದರೆ ಹಾಗೆ….”ಭಾವಯಾನಿ ಅವರ ಕವಿತೆ

ಅದೇಕೋ ಗೊತ್ತಿಲ್ಲ,
ಒಡಲೊಳಗೆ ಅದೇನೇ ಬೇನೆ ಬೇಸರಿಕೆಗಳಿದ್ದರೂ
ನಿನ್ನೊಂದಿಗೆ ಕೊಂಚ ಮಾತಾಡಿದರೂ ಸಾಕು,
ಅಮಾವಾಸ್ಯೆ ಕಳೆದ ಪೂರ್ಣ ಚಂದಿರನಂತೆ
ನನ್ನೊಳಗಿನ ತುಂಬಾ ಖುಷಿಯ ಬೆಳದಿಂಗಳು ಹರಡಿ ಬಿಡುತ್ತೆ!

ಜಗತ್ತಿನ ಅದೃಷ್ಟವಂತರಲ್ಲೆಲ್ಲ
ನಾನೇ ಹೆಚ್ಚು ಅನ್ನೋ ಭಾವನೆಯಿಂದ ಕೆಲವೊಮ್ಮೆ ಬೀಗುವುದೂ ಇದೆ,
ಕಾರಣ,ನೀನು ಮತ್ತು ಅದ್ಭುತವಾದ ನಿನ್ನೊಲವು!

ಬದುಕಿಗೇ ಜೀವ ಚೈತನ್ಯವೆನಿಸುವ
ನಿನ್ನ ಸ್ಫೂರ್ತಿದಾಯಕ ನುಡಿಗಳೆಲ್ಲ
ಕಗ್ಗತ್ತಲ ಬದುಕಿನಲ್ಲೂ ಕಂದೀಲಿನಂತೆ ದಾರಿ ದೀಪ,
ನೀನೆಂದರೆ ಹಾಗೇ ಅಲ್ವಾ?
ಹೃದಯಕ್ಕೆ ಎಂದೆಂದೂ ಅತ್ಯಾಪ್ತ!!


One thought on ““ನೀನೆಂದರೆ ಹಾಗೆ….”ಭಾವಯಾನಿ ಅವರ ಕವಿತೆ

Leave a Reply

Back To Top