ಕಾವ್ಯ ಸಂಗಾತಿ
ಶಾರದಜೈರಾಂ.ಬಿ
ಅಂಬೇಡ್ಕರ್ ಇದ್ದಿದ್ದರೆ…

ಮುಗ್ಧ ಮನುಜರೆ ವಿದ್ಯೆ ಕಲಿತು
ಸುಧಾರಿತ ಜೀವನ ನಡೆಸಿ
ಉನ್ನತ ಹುದ್ದೆ ಪಡೆಯಿರಿ
ಪ್ರತಿಮೆಗಳಲ್ಲಿ ಪ್ರತಿಷ್ಠಾಪಿಸಿ ಸುಮ್ಮನಾದಿರಿ
ಆದರ್ಶ, ಧ್ಯೇಯೋದ್ದೇಶಗಳನ್ನು ಮರೆತಿರಾ
ಆರಾಧಿಸಲಷ್ಟೇ ಅನುಕರಿಸಲು ಕಷ್ಟವೇ
ದುರ್ಬಲರ ರಕ್ಷಣೆಗೆ ಸಂವಿಧಾನವು
ಆಳಾದರೂ ಅರಸಾದರೂ ಬದಲಾಗದು
ಮೊದಲು ಮಾನವನಾಗು
ಕವಿ ಗೋಪಾಲಕೃಷ್ಣ ಅಡಿಗರು
ಹೀಗೆ ಬರೆಯುತ್ತಾರೆ…
ನಿಮ್ಮ ನಡೆ,ನುಡಿ, ವಿಚಾರ
ಗಾಂಭೀರ್ಯಗಳ ಉದಾಹರಣೆ
ಇತಿಹಾಸ ಸಂಪುಟದಲ್ಲಿ
ಮಾಸತೊಡಗಿದೆ ನಿಮ್ಮ ಹೆಸರಲ್ಲಿ ಕೊಳಲನ್ನೋಡೆದು
ಅಪಸ್ವರದ ತಾರಕಕ್ಕೇರಿ ಚೀರುತ್ತಲಿರುವವರು
ಸ್ವತಃ ವಿಗ್ರಹವಾಗಲಿಷ್ಟಪಡದಂಥವರು
ನಿಮ್ಮನ್ನ ಕಲ್ಲಾಗಿ ಮಾಡಿ ವಿಗ್ರಹ ಕೆತ್ತಿ
ಗುಡಿ ಕಟ್ಟಿ
ಬುದ್ದನನ್ನೆಂತೊ ಗಾಂಧಿಯನ್ನೆಂತೋ ಅಂತೇಯೇ
ಒಳಗಿಟ್ಟು ಮುಗಿಸುತ್ತಾರೆ, ಕತ್ತಲಲ್ಲಿ!
———-
ಶಾರದಜೈರಾಂ.ಬಿ

Dari deepa.vilas latthe