ಕಾವ್ಯ ಸಂಗಾತಿ
ಉತ್ತಮ ಎ. ದೊಡ್ಮನಿ
ಪ್ರಾತಿನಿಧ್ಯ…

ಮೀಸಲಾತಿ ಎಂದ ಕ್ಷಣ
ಓ! ಮೀಸಲಾತಿನಾ…. ಅಂತ ಹೇಳಿ
ಕಣ್ಣು ಮೂಗು ಹಿಗ್ಗಿಸಿ, ಅದೂ….
ಎಸ್ಸಿ, ಎಸ್ಟಿ ಗೆ ಇದೆ ಎನ್ನುವರೇ ಅಧಿಕ
ಮಾತು ಮಾತಲ್ಲಿ ಕೊಂಕಿಸಿ ಮಾತನಾಡುವ
ಅಧಮರೇ ಮೀಸಲಾತಿ ಅನ್ನೋದು
ಆರ್ಥಿಕ ಸಮಾನತೆ ಅಲ್ಲ ಹಂಚಲು
ಅದು ಸಾಮಾಜಿಕ, ಶೈಕ್ಷಣಿಕ ಸಮಾನತೆ
ಸಮಾನತೆ ಕೊಟ್ಟ ಸಂವಿಧಾನವನ್ನು
ಅಲ್ಲಗಳೆಯುವ ಮಹಾ ದೇಶಭಕ್ತರೆ
ವಿಚಾರ ಶಕ್ತಿ ಕಳೆದುಕೊಂಡು
ಗಬ್ಬುನಾರುತ್ತಿರುವ ಗುಲಾಮರಿವರು
ಶೋಷಿತರು ಧ್ವನಿ ಇಲ್ಲದ ಬಡವರಿಗೆ
ಸಾಮಾಜಿಕ ಸ್ವಾಭಿಮಾನದ
ಬದುಕು, ಬದಕಲು ನೀಡುವದೇ
ಪ್ರಾತಿನಿಧ್ಯ, ಅದು ಮೀಸಲಾತಿ ಅಲ್ಲ
ಆಳ-ಅಗಲ ಅರಿಯದವರೇ
ಸರಕಾರಿ ಕೋಟಾದಲ್ಲಿ ಮಾತ್ರ ಇರುವುದು
ಅದನ್ನೂ ತಗೆಯಲು ಹಗಲು-ರಾತ್ರಿ
ಕಳ್ಳ ಬೆಕ್ಕಿನಂತೆ ಹೊಂಚ್ಚು ಹಾಕಿ ಕಾಯುತ್ತಿದ್ದಾರೆ
ದನದ ಕೊಟ್ಟಗೆಯಲ್ಲಿ ಬಿದ್ದವರು
ನಮ್ಮೇದರೆ ಸರಿ ಸಮಾನಾಗಿ ಬದುಕುತ್ತಿರುವದು
ಸಹಿಸಲಾಗದೆ ಖಾಸಗಿಕರಣದ ನೇಪವಡ್ಡಿ
ಮೀಸಲಾತಿ ಮೋಟಾಕುಗೊಳಿಸುತ್ತಿದ್ದಾರೆ
ಹಂಗಿಸುತ್ತಾ, ಅಣುಕಿಸುತ್ತಾ, ಟಿಕೀಸುವರೇ
ಅರಿವಿಲ್ಲದೆ ಮೀಸಲಾತಿ ಒಳಗೆ ನಿಂತ್ತು
ಮೀಸಲಾತಿ ಎಲ್ಲದುಕ್ಕು ಉಚಿತ
ಇದರಿಂದ ನಮಗೆ ಏನು ಸಿಗುತ್ತಿಲ್ಲವೆಂದು
ವದ್ರುವ ಅಲ್ಪ ಜ್ಞಾನಿಗಳೇ ಹೆಚ್ಚು
ಕುಡಿದು, ತಿಂದು ಮೋಜಿನಲ್ಲಿರುವ
ಯುವ ಪಿಳುಗೆಯಾ ಗುಲಾಮರೇ
ಎಚ್ಚೆತ್ತು ಕೊಳ್ಳದೆ ಹೋದರೆ
ಮತ್ತೆ ಮರುಕಳಿಸುತ್ತೆ ಇತಿಹಾಸ
———-
ಉತ್ತಮ ಎ. ದೊಡ್ಮನಿ
