ಪುಸ್ತಕ ಸಂಗಾತಿ
ಉತ್ತಮ ಎ. ದೊಡ್ಮನಿ ಬರೆದಿರುವ ಮುನ್ನುಡಿ.
ರಾ ಜ. ಅಂಬರೀಶ ಅವರ ಕೃತಿ
“ಬಾಬಾ ಸಾಹೇಬರ ಸಂವಿಧಾನ
ಭಾರತೀಯರಿಗೆ ಏಕೆ ಬೇಕು?’


ರಾ ಜ. ಅಂಬರೀಶ ರವರು ಬರೆದಿರುವ ‘ಬಾಬಾ ಸಾಹೇಬರ ಸಂವಿಧಾನ ಭಾರತೀಯರಿಗೆ ಏಕೆ ಬೇಕು?’ ಎನ್ನುವ ಕೃತಿಗೆ ಉತ್ತಮ ಎ. ದೊಡ್ಮನಿ ಬರೆದಿರುವ ಮುನ್ನುಡಿ.
ತಲೆಯಲ್ಲಿ ಜಡ್ಡು ಹಿಡಿದ ನಂಜನ್ನು ತಗೆಯುವ “ಬೂಸ್ಟ್” ನಂತೆ ಇರುವ ಲೇಖನೆಗಳು.
“ಪ್ರೀತಿಸಲು ಸಮಯವಿಲ್ಲ, ದ್ವೇಷಿಸಲೆಲ್ಲಿ” ಎನ್ನುವ ಬುದ್ಧರ ವಾಣಿಯಂತೆ ಬದುಕುತ್ತಿರುವ ಅಪಟ್ಟ ಗ್ರಾಮೀಣ ಪ್ರತಿಭೆ ಅಂಬರೀಶ ರಾಯಕೋಡ್. ಹುಟ್ಟಿದ್ದು ಹಳ್ಳಿಯಲ್ಲಾದರೂ, ಬೆಳೆದಿದ್ದು ತಾಲೂಕು ಅಂತ ಕರೆಸಿಕೊಳ್ಳುವ ಚಿಂಚೋಳಿಯ ಅಮ್ಮನ ತವರು ಮನೆಯಲ್ಲಿ. ಹುಟ್ಟಿನಿಂದ ಜಾತಿ, ಧರ್ಮದ ಬಂಧನದಲ್ಲಿ ಬೆಳೆದು, ಅದರ ವಿರುದ್ಧ ಹೋರಾಟದ ಕಿಚ್ಚನ್ನು ಬಾಲ್ಯದಿಂದ ಮೈಗುಡಿಸಿಕೊಂಡು ಬೆಳದವರು. ಅಲ್ಲಿಂದಲೇ ಆ ಅನಿಷ್ಟ ಪದ್ಧತಿಯನ್ನು ಸಮಾಜದಿಂದ ಬುಡ ಸಮೇತ ಕಿತ್ತೊಗೆಯಬೇಕೆಂದು ಅದರ ವಿರುದ್ದ ಹೋರಾಟ ಮಾಡುವ ಮನೋಭಾವ ಬೆಳಸಿಕೊಂಡವರು.
ಕಾಲೇಜು ದಿನಗಳಲ್ಲಿ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ, ಬುದ್ಧ,ಬಸವ, ಅಂಬೇಡ್ಕರ್, ಫುಲೇ ದಂಪತಿ, ಟಿಪ್ಪು, ಶಾಹು ಮಹಾರಾಜರು ಹೀಗೆ ಬಹುಜನ ನಾಯಕರ ತೆಕ್ಕೆಗೆ ಬಿದ್ದವರು. ಜಾತಿ ವ್ಯವಸ್ಥೆಯಲ್ಲಿ ಬೆಂದು, ಹದಗೊಂಡು ಸಮಾಜದಲ್ಲಿರುವ ಈ ಕಸವನ್ನು ಸ್ವಚ್ಛ ಮಾಡಲು ಫಣ ತೊಟ್ಟ ಅಂಬರೇಶ್. ಮೊದಲೆ ಹೇಳಿದಂತೆ ಹೃದಯದಲ್ಲಿ ಅಪಾರ ಪ್ರೀತಿಯನ್ನು ಹೊತ್ತು ತಿರುಗುತ್ತಿರುವವರು.
ಈ ಕೃತಿಯು ಒಟ್ಟು ಹತ್ತು ಲೇಖನೆಗಳ ಗುಚ್ಛ . ಇದು ಇವರ ಮೊದಲ ಕೃತಿ, ಆದರೂ ಇವರ ಬರವಣಿಗೆ ನೋಡಿ ಹಾಗೆ ಅನ್ನಿಸುವದಿಲ್ಲ. ಪ್ರತಿಯೊಂದು ಲೇಖನೆಗಳು ಕೂಡ ಈ ಸಮಾಜದಲ್ಲಿ ನಡೆದಿರುವ ಮತ್ತು ನಡೆಯುತ್ತಿರುವ ಘಟನೆಗಳ ಈ ಸಮಾಜದೇದುರ ತೆರೆದಿಟ್ಟಿದ್ದಾರೆ. ಮೂಲಭೂತವಾದಿಗಳು ಮಾಡುತ್ತಿರುವ ಕುತಂತ್ರ-ಅನ್ಯಾಯವನ್ನು ತುಂಬಾ ಆಳವಾಗಿ ಮತ್ತು ನಿಖರವಾಗಿ ಪ್ರಸ್ಥಾಪಿಸಿದ್ದಾರೆ. ಇತ್ತೀಚಿಗೆ ಸಂವಿಧಾನದ ಮೇಲೆ ಮಾಡುತ್ತಿರುವ ಹಲ್ಲೆಯ ಕುರಿತಾದ ಲೇಖನದಲ್ಲಿ “ಭಾರತೀಯರಿಗೆ ಬಾಬಾ ಸಾಹೇಬರ ಸಂವಿಧಾನ ಏಕೆ ಬೇಕು”? ಎನ್ನುವ ಲೇಖನದಲ್ಲಿ “ಆರ್ಟಿಕಲ್” ಸಹಿತ ವಿವರಣೆ ಕೊಟ್ಟಿದ್ದಾರೆ. ಜೊತೆಗೆ ಸಾವಿತ್ರಿಬಾಯಿ ಫುಲೆರವರ ಲೇಖನದಲ್ಲಿ, ಶೂದ್ರರಿಗೆ ಅಸಲಿ ಶಿಕ್ಷಣ ದೇವತೆ ಯಾರಾಗಿದ್ದಾರೆ, ಯಾರಾಗಬೇಕಾಗಿತ್ತು ಎನ್ನುವುದನ್ನು ವಿವರಿಸುವದರ ಜೊತೆಗೆ ಅವರ ಬದುಕು,ಬರಹ ಅಕ್ಷರ ಕ್ರಾಂತಿಯ ಬಗ್ಗೆ ತಿಳಿಸಿದಾರೆ.
ಇನ್ನೊಂದು ಲೇಖನದಲ್ಲಿ, ಮೀಸಲಾತಿ ಬಗ್ಗೆ ಇದ್ದ ಗೊಂದಲ, ತಾರತಮ್ಯಕ್ಕೆ ತೆರೆ ಎಳದಿದ್ದಾರೆ.ಅದರೊಂದಿಗೆ ಇನ್ನಿತರ ಲೇಖನಗಳನ್ನು ನೋಡಿದಾಗ ಎಲ್ಲಾ ಮಹಾಪುರುಷರನ್ನು ಜಯಂತಿಗೆ ಸೀಮಿತ ಮಾಡಿದೆವಾ? ಅವರ ವಿಚಾರಗಳನ್ನು ಪಾಲಿಸದೆ ಭಕ್ತಿಯಲ್ಲಿ ಮುಳಗಿ ಕಾಲಹರಣ ಮಾಡುತ್ತ ಬಿದ್ದಿದಾರೆ ಎಂದು ಆತಂಕ ವ್ಯಕ್ತ ಪಡಸಿದ್ದಾರೆ.
ಈ ನೆಲದ ಭವಿಷ್ಯ ಶಾಲಾ ಕೊಠಡಿಯಲ್ಲಿ ನಿರ್ಮಾಣವಾಗುತ್ತೆ, ಆದರೆ…ವಿದ್ಯಾರ್ಥಿಗಳು ಶಾಲೆ ಕಲಿಯುವುದನ್ನು ಬಿಟ್ಟು ಅಂದಾಭಿಮಾನಿಗಳಾಗಿ ಧರ್ಮದ ನಶೆಯನ್ನು ಹಚ್ಚಿಕೊಂಡು ತಿರುಗುತ್ತಿರುವುದನ್ನು ನೋಡಿ ಅವರಿಗೆ “ಟ್ಯಾಟು” ಎನ್ನುವ ಲೇಖನದ ಮೂಲಕ ತಿಳಿ ಹೇಳಿದ್ದು, ಅವರಲ್ಲಿರುವ ಸಾಮಾಜಿಕ ಕಳಕಳಿ ಹೆಂತದು ಎನ್ನುವುದು ತಿಳಿಯುತ್ತದೆ. ಇಷ್ಟೆಲ್ಲ ಬರೆಯಲು ಅವರ ಅವಿರತ ಓದು, ಹೋರಾಟವೆ ಕಾರಣ. ನಾನು ನೋಡಿದ ಹಾಗೆ ಸಿಟ್ಟು,ಅಸೂಯೆ ಪಟ್ಟಿದು ಕಂಡಿಲ್ಲ. ಸದಾ ನಗುಮುಖದೊಂದಿಗೆ ಎಲ್ಲರ ಜೊತೆ ಬೆರೆಯುವ ಗುಣ.
ಇನ್ನು ಈ ಕೃತಿಯಲ್ಲಿ ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳೆನ್ನುವ ಎರಡು ಲೇಖನಗಳು ಈ ನಾಡಿನ ನಾಗರಿಕರ ಕುರಿತು ಬರೆದಿದ್ದು. ಎಲ್ಲರೂ ಹಕ್ಕುಗಳನ್ನು ಕೇಳುತ್ತಾರೆ ಆದರೆ ಕರ್ತವ್ಯಗಳನ್ನು ಮರೆತುಬಿಟ್ಟಿದ್ದಾರೆ, ಹಕ್ಕುಗಳು ಎಷ್ಟು ಮುಖ್ಯವೋ, ಕರ್ತವ್ಯಗಳು ಕೂಡ ಅಷ್ಟೇ ಮುಖ್ಯ ಎನ್ನುವುದು ಸಮಾಜಕ್ಕೆ ತಿಳಿಸುದ್ದು ಇಲ್ಲಿ ನೋಡಬಹುದು. ಬಹುಜನ ಚಳುವಳಿಯಲ್ಲಿ ಸಕ್ರೀಯವಾಗಿ ತೋಡಗಿಸಿಕೊಂಡು, ಸಾಹಿತ್ಯ ಬರೆದು ಅದನ್ನು ತಮ್ಮದೆ ಕಂಠದಲ್ಲಿ ಜನರಿಗೆ ತಲುಪಿಸುವ ಕಾರ್ಯ ಮಾಡಿದ್ದು. ಬಾಬಾ ಸಾಹೇಬರನ್ನು ತಮ್ಮ ಜೀವನದಲ್ಲಿ ಪಾಲಿಸುತ್ತಾ ಅವರ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಐ ಟಿ ಐ ಕಾಲೇಜಿನಲ್ಲಿ ಶಿಕ್ಷಕ ವೃತಿ, ಜೊತೆ ಜೊತೆಗೆ ಚಳುವಳಿಯಲ್ಲಿ ತೊಡಗಿರುವದರಿಂದ ಅವರ ಬಳಗ ಬಳ್ಳಿಯಂತೆ ವಿಸ್ತರವಾಗಿ ಹರಡಿದೆ. ವಿದ್ಯಾರ್ಥಿಗಳ ಜೊತೆ ಅಣ್ಣನಂತೆ, ಗೆಳೆಯನಂತೆ ಭೋದನೆ ಜೊತೆ ಅವರ ಬದುಕಿನ ಪಾಠ ಮಾಡುತ ಸದಾ ಅವರಿಗೆ ಬೆನ್ನಲುಬಾಗಿ ನಿಂತಿದ್ದಾರೆ. ನಾನೇ ಅಷ್ಟೋ ಸಾರಿ ಹೇಳಿದುಂಟು, ಯಾವುದಾದ್ರೂ ಎಲೆಕ್ಷನ್ ನಿಲ್ಲಿ ಆರಾಮಾಗಿ ನಿಮ್ಮ ವಿದ್ಯಾರ್ಥಿಗಳೆ ಗೆಲ್ಲಿಸಿ ತರುತ್ತಾರೆ ಅಂತ. ಚಳುವಳಿ ಹಾಡು ಬರವಣಿಗೆ ಇಷ್ಟೆಲ್ಲ ಮಾಡುತ್ತಿರುವ ರಾಯಕೋಡ್ ಅವರ ಜೊತೆ ಬೆನ್ನ ಹಿಂದಿನ ಬೆಳಕಾಗಿ ಅವರ ಪತ್ನಿ “ಆಶಾ” ಅವರ ಜೊತೆ ಹೆಗಲಿಗೆ ಹೆಗಲಾಗಿದ್ದಾರೆ. ಹಾಗೂ ತಮ್ಮ ಜನ್ಮದಿನ ಮತ್ತು ಮದುವೆಯ ವಾರ್ಶಿಕೋತ್ಸವದಂದು ತಾಲೂಕಿನ ಇಲಾಖೆಗಳಿಗೆ ಸಂವಿಧಾನ ಪೀಠಕೆ ಹಾಗೂ ಬಾಬಾ ಸಾಹೇಬರ ಬರಹ ಮತ್ತು ಭಾಷಣಗಳನ್ನು ನೀಡಿದ್ದು ಅವರ ಶೈಕ್ಷಣಿಕ ಕಾಳಜಿ ಎದ್ದಿ ಕಾಣುತ್ತದೆ.
ಒಟ್ಟಾರೆಯಾಗಿ “ಬಾಬಾ ಸಾಹೇಬರ ಸಂವಿಧಾನ ಭಾರತೀಯರಿಗೆ ಏಕೆ ಬೇಕು ಎನ್ನುವ ಕೃತಿಯಲ್ಲಿ ಆರ್ಥಿಕ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕುರಿತಾಗಿ ಬರೆವುದರ ಜೊತೆಗೆ ಸ್ವಾತಂತ್ರ ಪೂರ್ವ ಭಾರತದ ಪ್ರಸ್ಥಿತಿ, ಅಲ್ಲಿನ ಮನುಷ್ಯ ಜೀವಕಾಗಿ ಹೋರಾಡಿದ ಪುಲೆ ದಂಪತಿ, ಶಾಹು, ನಾಲ್ವಡಿ, ಬಹುಜನ ನಾಯಕರನ್ನು ನೆನೆಯುತ್ತ ಮುಂದೆ ಅಂದರೆ ಇದೆಲ್ಲವೂ ಮರೆತು ತಮ್ಮದೆ ಮೋಜು ಮಸ್ತೀಯಲ್ಲಿ ಕಾಲ ಕಳೆಯುತ ಅಥವಾ ಕಳೆಯುವಂತೆ ಮಾಡುತ್ತಿರುವರ ಮಾತಿಗೆ ಮಾರಾಳಗತ್ತಾ ಬದಕನ್ನು ಹಾಳು ಮಾಡಿಕೊಳ್ಳುವ ಯುವಕರನ್ನು ಎಚ್ಚರಿಸುವ ಲೇಖನೆಗಳು ಇವೆ. ಹಿಂತಹ ಪ್ರಸ್ಥತಿಯಲ್ಲಿ ಕೃತಿ ಅವಶ್ಯಕತೆ ವಿದ್ಯಾರ್ಥಿಗಳ ಜೊತೆ ಎಲ್ಲರಿಗೂ ಇದೆ.
ಈ ಕೃತಿಯ ಮೊದಲು ಓದುಗನಾಗಿ ಮಾಡಿದ್ದು ಅಲ್ಲದೆ ಒಂದೇರಡು ಮಾತು ಬರೆಯಲು ಅವಕಾಶ ನೀಡಿದ ಆತ್ಮೀಯ ಮಿತ್ರ ಅಂಬರೀಶ್ ಅವರಿಗೆ ಧನ್ಯವಾದಗಳು. ಇಲ್ಲಿ ಕೆಲವೊಂದು ಲೇಖನಗಳು ದೀರ್ಘವಾಗಿವೆ. ಇನ್ನು ನಾಡಿನ ಹಿರಿಯ-ಕಿರಿಯ ಸಾಹಿತಿಗಳ ಕೃತಿಗಳು ಓದಬೇಕೆಂದು ಹೇಳುತ್ತಾ, “ಬಾಬಾಸಾಹೇಬರ ಸಂವಿಧಾನ ಭಾರತೀಯರಿಗೆ ಏಕೆ ಬೇಕು?” ಎನ್ನುವ ಕೃತಿ ಮೂಲಕ ಸಾಹಿತ್ಯದಲ್ಲಿ ಪಾದರ್ಪಣೆ ಮಾಡುತ್ತಿದ್ದ ಅಂಬರೀಶ್ ಅವರಿಗೆ, ಸಾಹಿತ್ಯ ಲೋಕದ ಎಲ್ಲಾ ಗೌರವಗಳು ಸಿಗಲಿ, ಇನ್ನೂ ಹತ್ತು ಹಲವು ಕೃತಿಗಳು ಈ ಕನ್ನಡ ಸಾಹಿತ್ಯ ಲೋಕಕೆ ನೀಡಲೆಂದು ಪ್ರೀತಿಯಿಂದ ಹಾರೈಸುತ್ತೇನೆ.
ಉತ್ತಮ ಎ. ದೊಡ್ಮನಿ
