ಕಾವ್ಯ ಸಂಗಾತಿ
ಕೆ.ಎಂ. ಕಾವ್ಯ ಪ್ರಸಾದ್
ʼನನ್ನೊಳ ಮನಸಿನ ಕಂಬನಿʼ


ನಾ ಮರೆಯಲು ಸಾಧ್ಯವೇ ಹೇಳು ಗೆಳೆಯ
ನೋವು ನುಂಗುತ್ತ ನಾ ಮೌನವಾಗಿರಲು!
ನನಗೆ ಅನುದಿನವು ನಿನ್ನದೆ ನೆನಪಿರಲು
ಬಿಡಲು ಸಾಧ್ಯವಿಲ್ಲ ನಿನ್ನ ಜಪವ ಇನಿಯ!!
ಮಧು ಮಗಳಾದರು ನಿನ್ನ ತುಂಬಾ ನಾ ನಂಬಿದೆ
ಮನೆಯವರನ್ನು ನೋಯಿಸಿ ನಿನ್ನ ಪ್ರೀತಿ ಮಾಡಿದೆ!
ಇವನು ನನ್ನಾವನೆಂದು ನಿನ್ನ ಜೊತೆ ಬಂದೆ
ನನ್ನ ಎಲ್ಲಾ ಸರ್ವಸ್ವವನ್ನು ನಿನಗೆ ಧಾರೆ ಹೇಳೆದೆ!!
ಪ್ರತಿ ಕ್ಷಣವು ನೀನು ನನ್ನ ಜೀವ ಬಿಡಲಾರೆ ಎನ್ನುತ್ತಿದ್ದೆ
ನೀನು ಬಿಟ್ಟರೆ ನನಗೆ ಯಾರು ಇಲ್ಲವೆಂದು ಹೇಳುತ್ತಿದ್ದೆ!
ನನಗೆ ನೀನು ನಿನಗೆ ನಾನು ಇಷ್ಟೇ ಜೀವನ ಎಂದೆ
ನಿನ್ನ ಪ್ರೀತಿಯಲ್ಲಿ ನನ್ನನ್ನೇ ನಾ ಮರೆಯುವಂತೆ ಮಾಡಿದೆ!!
ವರುಷಕ್ಕೆ ನಾ ಒಂದು ಮಗುವಿಗೆ ಜನುಮ ನೀಡಿದೆ
ಮಗುವಾದ ಮೇಲೆ ನೀನೇಕೆ ನನಗೆ ಕಣ್ಣೀರು ಹಾಕಿಸಿದೆ!
ನಾ ನಿನ್ನ ಕೊರಳಿಗೆ ಕಟ್ಟಿದ್ದ ತಾಳಿ ಕೊನೆವರೆಗು ಎಂದೆ
ಹೇಳಿ ಹೋದವ ಮತ್ತೆ ಬರಲಿಲ್ಲ ನನ್ನಿಂದ ದೂರ ಹೋದೆ!!
ನಿನ್ನ ಕುರುಡು ಪ್ರೀತಿಯಲ್ಲಿ ನನಗಿರಲಿಲ್ಲ ಜ್ಞಾನ
ಪ್ರೀತಿಯು ಅರಿಯದೆ ಹೀಗ ಬದುಕಾಗಿದೆ ಬಲು ಹೀನ!
ನಿನ್ನೆಲ್ಲ ನೆನಪುಗಳು ಕಾಡುತ್ತಿವೆ ನನಗೆ ಅನುದಿನ
ಕೊರಗಿ ನನ್ನೊಳ ಮನಸ್ಸಿನ ಕಂಬನಿ ಯಾರಿಗೆ ದಾನ!!
————————————————————–
ಕೆ. ಎಂ. ಕಾವ್ಯ ಪ್ರಸಾದ್.
ಮನಸ್ಸಿಗೆ ತುಂಬಾ ನೋವಾಯಿತು ಓದಿ