ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ʼನಿನ್ನ ಸನಿಹʼ

ಬಯಸುವೆ ಏನು ನುಡಿಗಳ ಮಾತು
ಕೇಳದೆ ನೀನು ಹೇಳಲಿ ಏನು
ಮಾತಿಗೂ ಒಂದು ಸೊಗಸನು ಇಟ್ಟು
ನಗುವನ್ನು ತರಲು ಬಯಸುವೆ ನಾನು
ಚಂಚಲ ಇರದ ಮನಸಿನ ಸ್ನೇಹ
ಸಿಹಿಯನೆ ನೀಡೋ ಹಣ್ಣಿನ ತೋಟ
ಕಣ್ಣಿನ ನೋಟ ಪ್ರೀತಿಯ ಆಟ
ಇರಲಿ ಹೀಗೆ ಬದುಕಿನ ಓಟ
ಅಂಗೈ ರೇಖೆ ಹೇಳಿದೆ ಹೆಸರು
ನಿನ್ನ ಕನಸು ಬೀರುವ ಸೊಗಸು
ನೀನು ನಾನು ಭೂಮಿ ಬಾನು
ಜೊತೆಯಲಿ ಇರಲು ಹಾಲು ಜೇನು
ನಡೆದರು ನೀನು ಭೂಮಿಗೂ ದೂರ
ಇರುವೆನು ನಾನು ನಿನ್ನ ಸನಿಹ
ಬಾನಿಗೂ ಇರಲು ಮೋಡದ ಅಂದ
ಬದುಕಿಗೆ ನಮಗೆ ನಾವೇ ಚಂದ.
ಮನ್ಸೂರ್ ಮೂಲ್ಕಿ


ಬಯಸುವೆ ಏನು ನುಡಿಗಳ ಮಾತು
ಕೇಳದೆ ನೀನು ಹೇಳಲಿ ಏನು
ಮಾತಿಗೂ ಒಂದು ಸೊಗಸನು ಇಟ್ಟು
ನಗುವನ್ನು ತರಲು ಬಯಸುವೆ ನಾನು
ಚಂಚಲ ಇರದ ಮನಸಿನ ಸ್ನೇಹ
ಸಿಹಿಯನೆ ನೀಡೋ ಹಣ್ಣಿನ ತೋಟ
ಕಣ್ಣಿನ ನೋಟ ಪ್ರೀತಿಯ ಆಟ
ಇರಲಿ ಹೀಗೆ ಬದುಕಿನ ಓಟ
ಅಂಗೈ ರೇಖೆ ಹೇಳಿದೆ ಹೆಸರು
ನಿನ್ನ ಕನಸು ಬೀರುವ ಸೊಗಸು
ನೀನು ನಾನು ಭೂಮಿ ಬಾನು ಜೊತೆಯಲಿ ಇರಲು ಹಾಲು ಜೇನು
ನಡೆದರು ನೀನು ಭೂಮಿಗೂ ದೂರ
ಇರುವೆನು ನಾನು ನಿನ್ನ ಸನಿಹ
ಬಾನಿಗೂ ಇರಲು ಮೋಡದ ಅಂದ
ಬದುಕಿಗೆ ನಮಗೆ ನಾವೇ ಚಂದ.
———————-
ಮನ್ಸೂರ್ ಮೂಲ್ಕಿ