ಹಮೀದಾಬೇಗಂ ದೇಸಾಯಿ‌ ಅವರ ಕವಿತೆ-ಹುಡುಕುತ್ತಿದ್ದೇನೆ…

ಹುಡುಕುತ್ತಿದ್ದೇನೆ  
ನನ್ನೊಳಗಿನ  ನನ್ನನ್ನು..
ಕಳೆದು  ಹೋಗಿದೆಯೋ
ಬಿಟ್ಟು  ಹೋಗಿದೆಯೋ
ಅಡಗಿಕೊಂಡಿದೆಯೋ..ಗೊತ್ತಿಲ್ಲ…

ತನ್ನವರೆನ್ನುವವರಿಗಾಗಿ
ನನ್ನ ಕನಸುಗಳ  ಕೊಲೆ ಮಾಡಿ
ಮರಳ ಭಿತ್ತಿಯ ಮೇಲೆ
ಮೃಗಜಲದಲಿ  ಅದ್ದಿ
ಮೂಡಿಸಲೆತ್ನಿಸುತಿದ್ದೇನೆ
ಶುಷ್ಕ  ಚಿತ್ರಗಳನು….
ಶಿಥಿಲಗೊಂಡ ಅಸ್ತಿತ್ವ ದಲಿ
ಸಿಕ್ಕಿಕೊಂಡಿದೆ  ನನ್ನತನ…ಹುಡುಕುತ್ತಿದ್ದೇನೆ….

ಯಂತ್ರದಂತಾಗಿ  ಬಿಟ್ಟಿದ್ದೇನೆ
ಬದುಕಿನ  ಚಕ್ರವ್ಯೂಹದಲಿ..
ಇಂಚಿಂಚು  ಸವೆಯುತ್ತಿದ್ದೇನೆ
ಕರ್ತವ್ಯಗಳ  ಘರ್ಷಣೆಯಲಿ…
ಕರಗಿ  ಹೋಗುತ್ತಿದ್ದೇನೆ
ನಿರ್ವಿಕಾರ  ಭಾವಗಳಲಿ…

ಆದರೂ , ಚಿಗುರಿದೆ ಕನಸು
ಪ್ರೀತಿ- ಭರವಸೆಯ ಬೊಡ್ಡೆಯಲಿ..
ಸಾಕಿಷ್ಟು  ನಾನು  ಬದುಕಲು ,
ನೆಮ್ಮದಿಯಿಂದ  ನಕ್ಕು  ನಲಿಯಲು…
ಅದಕ್ಕೇ…ಮತ್ತೆ  ಹುಡುಕುತ್ತಿದ್ದೇನೆ
ನನ್ನೊಳಗಿನ  ನನ್ನನು….


.

2 thoughts on “ಹಮೀದಾಬೇಗಂ ದೇಸಾಯಿ‌ ಅವರ ಕವಿತೆ-ಹುಡುಕುತ್ತಿದ್ದೇನೆ…

    1. ಸ್ಪಂದನೆಗೆ ಧನ್ಯವಾದ ತಮಗೆ.

      ಹಮೀದಾಬೇಗಂ ದೇಸಾಯಿ.ಸಂಕೇಶ್ವರ.

Leave a Reply

Back To Top