ಹಾ.ಮ ಸತೀಶ ಬೆಂಗಳೂರು ಅವರ ಗಜಲ್

ಜೀವನದ ದಾರಿಯಲಿ, ನೀನೊಮ್ಮೆ ಬಂದು ಬಿಡು
ಮೌನದ ಹಾದಿಯ ತೊರೆದು, ನೀನಿಂದು ನಿಂದು ಬಿಡು

ಬದುಕಿರುವ ಅಲೆಯೊಳಗೆ ,ಉಸಿರಿಲ್ಲವು ಯಾಕೆ
ಉರಿಯುತಿಹ ಜ್ವಾಲೆಯಲಿ, ನೀ ಹಾಗೆ ಬೆಂದು ಬಿಡು

ಕರ್ಪೂರ ಉರಿದುರಿದು ,ಹಣತೆಯಿಂದು ಸವೆಯುತಿದೆ
ಲವಲೇಶವೂ ಉಳಿಸದೆ ,ಬಡಿಸಿರುವುದ ತಿಂದು ಬಿಡು

ನಗುವ ಅಲೆಯಲೀ ನೋವ, ಮರೆಯುತ್ತಾ ಹೋದಂತೆ
ಮಾತಿನಲಿ ತೋರಣವನ್ನು ,ಕಟ್ಟಿ ನೀನು ಗೆಂದು ಬಿಡು

ಮೋಹಮದ ಬಿಸಿಯಾಟ ,ನನಗಿಂದು ಬೇಡ ಈಶಾ
ಚೇತನವು ಕರಗುತಲಿರಲು , ಹೀಗೆನ್ನ ಕೊಂದು ಬಿಡು

———

Leave a Reply

Back To Top