ಡಾ ಶಶಿಕಾಂತ ಪಟ್ಟಣ ರಾಮದುರ್ಗ‌ ಕವಿತೆʼಅನುಭವ ಮಂಟಪʼ

ಜಗದ ಮೇಲೊಂದು
ಹಿರಿದಿಪ್ಪ ಕಲ್ಯಾಣವೆಂಬ
ಪಟ್ಟಣದಲ್ಲಿ ನೆರೆದರಯ್ಯ
ಅಸಂಖ್ಯಾತ ಶರಣರು
ನಿತ್ಯ ಕಾಯಕ ದಾಸೋಹ
ಲಿಂಗ ಜಂಗಮ ಸೇವೆ
ಬರೆದರಯ್ಯ ಬಂಡಾಯದ
ಲಕ್ಷ ಲಕ್ಷ ವಚನಗಳನ್ನು
ಬಸವಣ್ಣ ಕಟ್ಟಿದನಯ್ಯಾ
ಹಿರಿಯ ಅನುಭವ ಮಂಟಪವ
ಚರ್ಚೆ ವಾದ ಶೂನ್ಯ ಪೀಠ
ಇಲ್ಲೊಬ್ಬ ಅವಿವೇಕಿ
ಅನುಭವ ಮಂಟಪ ಇರಲಿಲ್ಲವೆಂದು
ಹೇಳಿದಳು
ಅರೆ ಹುಚ್ಚನೊಬ್ಬ ಅವಳನ್ನು
ಸಮರ್ಥಿಸುತ್ತಿರುವನಯ್ಯ
ಅನುಭವ ಮಂಟಪ
ಇಲ್ಲ ಎನ್ನುವ ಭಂಡ ಮೂಳರ
ಕರೆದು ಎಡ ಪಾದದ
ಕೆರವ ತೆಗೆದು ಹರಿಯುವ
ಹಾಗೆ ಹೊಡೆ ಎಂದ ನಮ್ಮ
ಬಸವ ಪ್ರಿಯ ಶಶಿಕಾಂತ


27 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ‌ ಕವಿತೆʼಅನುಭವ ಮಂಟಪʼ

  1. ಸರ್ ನಿಮ್ಮ ಧೈರ್ಯಕ್ಕೆ ಶರಣು

  2. ನಿಜ ನಿಮ್ಮ ಮಾತಿನಲ್ಲಿ ನಮ್ಮ ಆಕ್ರೊಶವೂ ಇದೆ ಸರ್

  3. ಇದಕ್ಕಿಂತ ಚೆನ್ನಾಗಿ ಯಾರೂ ಉತ್ತರ ಕೊಟ್ಟಿರಲಿಕ್ಕಿಲ್ಲ ಸರ್ ಇನ್ನಾದರೂ ನಮ್ಮ ಶರಣರ ವಿಷಯಕ್ಕೆ ಬರದಿರಲಿ ವೈದಿಕ ಪರಂಪರೆಯವರು

  4. ನಿಮ್ಮ ನೇರ ನಡೆ -ನುಡಿಯ ದಿಟ್ಟ ಉತ್ತರದ ಸಾಲುಗಳು
    ಎಲ್ಲರನ್ನೂ ಎಚ್ಚರಗೊಳಿಸುವ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ ಸರ್

    ಸುಧಾ ಪಾಟೀಲ
    ಬೆಳಗಾವಿ

  5. ಈ ಕಟು ಸತ್ಯವನ್ನು ಒಪ್ಪಿಕೊ ಮನಸ್ಸು ಮುಖ್ಯವಾಗಿ ವಚನ ಕ್ರಾಂತಿಯ ಜೊತೆ ನಿಲ್ಲ ಬೇಕು ಸರ್

  6. ಬಟ್ಟೆಯಲ್ಲಿ ಸುತ್ತಿ ಸುತ್ತಿ ಬಡದಂಗ ಅದಾವ ,ಮುಟ್ಟಿ ಮುಟ್ಟಿ ನೋಡಬೇಕು, ನೋಡ್ರಿ, ಸರ್,, ಇನ್ನಾದರೂ ಪಾಠ ಕಲಿತಾರೋ ಇಲ್ಲ,,

  7. ಒಳ್ಳೆಯ ಚಾಟಿ ಏಟು…. ನೆರೆಯವರ ಮನೆಯ ದುಖಃಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲ ಸಂಗಮದೇವ… ತಮ್ಮ ತಮ್ಮ ತನುವ ಸಂತೖಸಿಕೊಳ್ಳಿ, ತಮ್ಮತಮ್ಮ ಮನವ ಸಂತೖಸಿಕೊಳ್ಳಿ….ನಮಗ್ಯಾಕೆ ತಮ್ಮ ಉಪದೇಶ..

  8. ಶರಣರ ವಚನ ಚಳುವಳಿ ಆಶಯ ಸಮಾಧಿ ಮಾಡಲು ಹೊರಟ ಕೆಲ ವೈದಿಕ ಮತ್ತು ನಮ್ಮ ಲಿಂಗಾಯತ ಧರ್ಮದ ದೊಡ್ಡ ಮುಖಂಡರು
    ಇತ್ತೀಚಿಗೆ ಲೋಕಲ್ ವಚನ ಯು ಟ್ಯೂಬ್ ಇಂಟರ್ವ್ಯೂ ನಲ್ಲಿ ವೀಣಾ ಅವರ ಮಾತಿಗೆ ನಾನು ಒಪ್ಪುತ್ತೇನೆ ಭೌತಿಕ ಅನುಭವ ಮಂಟಪ ಇರಲಿಲ್ಲ ಎಂದು ಹೇಳುವ ಮುಟ್ಟಾಳನನ್ನು ಚೆನ್ನಾಗಿ ತೀವಿದಿದ್ದಿರಿ ಸರ್

  9. ಸರ್ ಬಸವ ಕಲ್ಯಾಣದ ಟಿವಿ ಇಂಟರ್ವ್ಯೂ ನಲ್ಲಿ
    ನಮ್ಮ ಸಮಾಜದ ಒಬ್ಬ ಅತ್ಯಂತ ಹಿರಿಯ ಮುಖಂಡ ಮಾತಾನಾಡುತ್ತಿರುವಾಗ ಅನುಭವ ಮಂಟಪವೆ ಇರಲಿಲ್ಲ ಎಂತಲೂ ಎಲ್ಲಾ ಸ್ವಾಮೀಜಿ ಬಸವ ಸಮಿತಿ ಅಧ್ಯಕ್ಷರನ್ನು ಟೀಕಿಸಿದ್ದಾರೆ
    ಜೊತೆಗೆ ಬಸವನ್ನನವರನ್ನು ಬಸವನ್ನ ಸತ್ತ ಎಂದು ಏಕ ವಚನದಲ್ಲಿ ಹೇಳುತ್ತಾರೆ
    ಅತ್ಯಂತ ಗೊಂದಲಗಳನ್ನು ಹುಟ್ಟು ಹಾಕಿದ ಇಂತವರಿಗೆ ಒಳ್ಳೆಯ ಚಾಟಿ ಏಟು ಕೊಟ್ಟಿದ್ದೀರಿ ಸರ್

  10. ನಿಮ್ಮ ಲೇಖನಿ ತುಂಬಾ ಹರಿತ hipocrate ಜನರಿಗೆ ಚುಚ್ಚಿದ್ದಿರಿ
    ಕಾವಿ ಖಾದಿ ಸಮಾಜ ಮುಖಂಡರು ಇನ್ನೂ ಮೆಲಾದರೂ ಬಡಲಾಗಲಿ
    ಟಿವಿ ಇಂಟರ್ವ್ಯೂ ತೆಗೆದು ಕೊಳ್ಳುವವರು ಮತ್ತು
    ಕೊಡುವವರು ಲಿಂಗಾಯತ ಬಸವಾಯತ ಧರ್ಮದ ಬಗ್ಗೆ ಎಚ್ಚರ ವಹಿಸಿ ಮಾತಾಡ ಬೇಕು
    ನಿಮ್ಮ ಕವನ ಎಚ್ಛರಕೆಯ ಘಂಟೆ

  11. ನಿಮ್ಮ ಧೈರ್ಯ ಅಬ್ಬಾ ಹುಷಾರು ಸರ್, ಸತ್ಯಕಹಿ ಆಗಿರುತ್ತದೆ. ನಿಮ್ಮ ವೈಛಾರಿಕ ಹೋರಾಟಕ್ಕೆ ಮನ ಪೂರಕವಾಗಿ ಅಭಿನಂದನೆಗಳು

  12. Dr Shashikantji We appreciate your guts determination to fight against these Hipocrites
    However believe us Sri We are with u
    It is the high time that All Lingayat
    Mutts Leaders must know their Limits

  13. ಅವರೇ ನಂಬಿದ ಪ್ರಧಾನಿ ಹೊಸ ಪಾರ್ಲಿಮೆಂಟ ಭವನಕ್ಕೆ ಅನುಭವ ಮಂಟಪಂ ಎಂಬ ಹೆಸರಿಡುವ ಪ್ರಸ್ತಾವನೆ ತಂದಿದ್ದೂ, ಲಂಡನ್ ದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಟಾಪನೆ ಮಾಡುವಾಗ ಅನುಭವ ಮಂಟಪ ದ ಉಲ್ಲೇಖ ಮಾಡಿದ್ದು ನೆನಪಿಲ್ಲವೇ??? ಇಂತಹ ಮೂರ್ಖರಿಗೆ

Leave a Reply

Back To Top