ಮಕ್ಕಳ ಸಂಗಾತಿ
ಭುವನೇಶ್ವರಿ ರು. ಅಂಗಡಿ
ʼಕಿಟ್ಟನ ಒಬ್ಬಟ್ಟೂಟʼ



ಗೋಲಿಯಾಟ ಆಡಿ
ಜೇಬು ತುಂಬಿಕೊಂಡು
ಓಡಿ ಬಂದ ಕಿಟ್ಟನು
ಮುಖವನು ತೊಳೆದು
ತಲೆಯನು ಬಾಚಿ
ಕಟ್ಟಿದನವನು ಜುಟ್ಟನು
ಹಸಿವು ಹಸಿವೆಂದು
ಬೊಬ್ಬೆಯ ಹೊಡೆದ
ಬಾರಿಸುತ ತಾಟನು
ಕಾಟವನು ತಾಳದೆ
ತಂದಳವನ ಅಮ್ಮ
ಬಿಸಿಯಾದ ಒಬ್ಬಟ್ಟನು
ಗಿಂಡಿಯಲಿದ್ದ ತುಪ್ಪವ
ಸುರಿದು ಸುರಿದು
ನೆನೆಸಿದಳು ಒಬ್ಬಟ್ಟನು
ಒಂದು ಎರಡು ಮೂರು
ಎಣಿಸುತ ತಿಂದನು
ಜಟ್ಟಿಯು ಕಿಟ್ಟನು
ಊಟ ಮುಗಿಸಿ
ಗಡಿಬಿಡಿಯಲ್ಲಿ
ಮಾಡಿದ ಯಡವಟ್ಟನು
ಗಿಂಡಿಯಲಿದ್ದ ತುಪ್ಪವ
ಚೆಲ್ಲಿದ ನೋಡದೆ ಎಡವಿ
ಅದರಲ್ಲಿದ್ದ ಸೌಟನು
ಕಿಟ್ಟನ ಬಗ್ಗಿಸಿ ಸಿಟ್ಟಲಿ
ಅಮ್ಮ ದಬದಬ
ಕೊಟ್ಟಳು ಏಟನು
ಅಳುತ ಕಿಟ್ಟನು
ಹೊರಟನು ಆಟಕೆ
ಬೈಯುತ ಒಬ್ಬಟ್ಟನು
————–
ಭುವನೇಶ್ವರಿ ರು. ಅಂಗಡಿ
ಚಂದದ ಕವನ
Super meadame