ಈಶ್ವರ ಜಿ ಸಂಪಗಾವಿ‌ ಅವರ ಕೃತಿ “ಒಲವ ಚೈತ್ರವನ” ಒಂದು ಅವಲೋಕನ ವೈ ಎಂ ಯಾಕೊಳ್ಳಿ

ಈಶ್ವರ ಜಿ ಸಂಪಗಾವಿಯವರು ನಮ್ಮ ನಡುವಿನ ಹಿರಿಯರು. ಮೂಲತ: ಖಾನಾಪೂರ ತಾಲೂಕಿನ ಕಕ್ಕೇರಿಯವರಾದ ಅವರು ಅಲ್ಲಿನ ಮಾಧ್ಯಮಿಕ ಶಾಲೆಯ ಕನ್ನಡ ಭಾಷಾ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿ ಅದೇ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
    ಪ್ರಬುದ್ಧ ಕವಿಗಳೂ ಆದ ಶ್ರೀಯುತರು  ಒಂದು ಕವನ ಸಂಕಲನವನ್ನೂ ಪ್ರಕಟ ಪಡಿಸಿದ್ದಾರೆ . ಅವರು ಬರೆಯದ ಕಾವ್ಯಪ್ರಕಾರವೇ ಇಲ್ಲ ೧೨೦೦ ರಷ್ಟು ಮುಕ್ತಕಗಳನ್ನು ರಚಿಸಿದುದೆ ಅವರ ಕಾವ್ಯ ಶ್ರೀಮಂತಿಕೆಗೆ ಸಾಕ್ಷಿ. ಅಲ್ಲದೇ ಭಾವಗೀತೆಗಳು, ಹನಿಗವನಗಳು ಮಾತ್ರವಲ್ಲದ  ಹಳೆಗನ್ನಡ ಛಂದಸ್ಸಿನ ರಚನೆಗಳಾ ತ್ರಿಪದಿ, ಅಕ್ಕರಿಕೆ , ಏಳೆ, ಕಂದ , ಸಾಂಗತ್ಯ, ಮೊದಲಾದ ಕಾವ್ಯಪ್ರಕಾರಗಳಲ್ಲಿ ಅವರು ಪ್ರಯೋಗಗಳನ್ನು ಮಾಡಿದ್ದಾರೆ. ಹೊಸಗನ್ನಡ ಕಾವ್ಯಪ್ರಕಾರಕ್ಕೆ ಬೇರೆ ಭಾಷೆಗಳಿಂದ ಬಂದ  ತನಗ, ಹೈಕು, ಲಿಮರಿಕ್  ಮೊದಲಾದ ಪ್ರಕಾರಗಳಲ್ಲಿಯೂ ಬರೆಯುವ ಪ್ರಯತ್ನ  ಮಾಡಿದ್ದಾರೆ. ಪ್ರಯೋಗಶೀಲ ಕವಿಗೆ ಯಾವ ಕಾವ್ಯಪ್ರಕಾರ ರೂಢಿಸಿಕೊಳ್ಳುವದು ಕಷ್ಟವಲ್ಲ ಎನ್ನುವದಕ್ಕೆ ಸಾಕ್ಷಿಯಾಗಿ ಗಜಲ್ ಕಾವ್ಯದ ವ್ಯಾಮೋಹಕ್ಕೆ ಬಿದ್ದ ಶ್ರೀಯುತರು ಬಹಳ ಕಷ್ಟ ಪಟ್ಟು ಅಧ್ಯಯನ ಮಾಡಿ ಅದರ ಗತ್ತು ಪಟ್ಟುಗಳನ್ನು ಸ್ವತ: ರೂಢಿಸಿಕೊಂಡು ಇಂದು ಒಬ್ಬ ಪ್ರಬುದ್ಧ ಗಜಲ್ ಕವಿಯಾಗಿದ್ದಾರೆ. ಗಜಲ್ ಎಂದರೆ ಹಾಗೆಯೇ.  ಒಲಿಸಿಕೊಂಡರೆ ಮಾತ್ರ ಅದು ಒಲಿಯುತ್ತದೆ. ಅದರ ರಚನೆ ಪಟ್ಟು ಸಾಮುಗಳನ್ನು ತಿಳಿಯದಿದ್ದರೆ ನಾವು ನಿಯಮಗಳ ಗೊಜಲಿನಲ್ಲಿಯೆ ಸಿಲುಕಿ ಒದ್ದಾಡಬೇಕಾಗುತ್ತದೆ. ಅದರೆ ಈಶ್ವರ ಸರ್ ಅವರ ವಿಷಯದಲ್ಲಿ ಹಾಗಾಗದೇ ಅವರು ಬಹುಬೇಗ ಗಜಲ್ ನ ಎಲ್ಲ ನಿಯಮಗಳನ್ನು ಆತ್ಮಸಾತ್  ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡದಲ್ಲಿ ಗಜಲ್ ಬರೆಯುವವರು ಸಾಕಷ್ಟು ಜನರಿದ್ದಾರೆ .ಅದರೆ ಸಿದ್ಧಿ ಮಾಡಿಕೊಂಡಿರುವವರು ಬಹಳ ಕಡಿಮೆ.  ಅಂಥ ಸಿದ್ದಿ ಮಾಡಿಕೊಂಡವರಲ್ಲಿ ಈಶ್ವರ ಜೀ ಸಂಪಗಾವಿಯವರ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ.

        ‘ಒಲವಿನ ಚೈತ್ರವನು ಈ  ದಿಶೆಯಲ್ಲಿ ಅವರು ರಚಿಸಿದ ೮೦ ಗಜಲ್‌ಗಳ ಗುಲ್ ದಸ್ತಾ.ಇದಕ್ಕೆ ಹಿರಿಯ ಅನುಭವಿ ಕವಯಿತ್ರಿ , ಗಜಲ್ಕಾರ್ತಿಯರಾದ ಶ್ರೀಮತಿ ಶಮಾ ಜಮಾದಾರ ಅವರು ಅಧ್ಯಯನ ಪೂರ್ಣ ಮುನ್ನುಡಿ ಬರೆದಿದ್ದು ಇನ್ನೋರ್ವ ಪ್ರಸಿದ್ಧ ಗಜಲ್ಕಾರ್ತಿ ಅನಸೂಯ ಸಿದ್ದರಾಮ ಅವರ ಬೆನ್ನುಡಿ ಇದೆ. ಈ ಕೃತಿ ೨೦೨೨ ರಲ್ಲಿ ಪ್ರಕಟವಾಗಿದೆ.
ಈ ಸಂಕಲನದಲ್ಲಿ ಗಜಲ್ ಕವಿ ಮುರದ್ದಪ್ ಗಜಲ್  ಗಜಲ್ ನ ಎಲ್ಲಾ ನಿಯಮಗಳನ್ನು ಹೊಂದಿದ್ದು ರದೀಫ್ ಮತ್ತು ಕಾಫಿಯಾ ಎರಡನ್ನೂ ಹೊಂದಿರುವ ಗಜಲ್, ಗೈರ್ ಮುರದ್ದಪ್ ಗಜಲ್ ಗೈರ್ ಮುರದ್ದಪ್ ಎಂದರೆ ರದೀಪ್ ಇಲ್ಲದೇ ಬರೀ ಕಾಫಿಯಾಗಳನ್ನು ಹೊಂದಿರುವ ಗಜಲ್, ತರಹಿ ಗಜಲ್ (ಅನು ಕಜವಿಯ ಒಂದು ಮತ್ಲಾ ಅಥವ ಮಿಶ್ರಾವನ್ನು ತಗೆದುಕೊಂಡು ಮೂಲ ಕವಿಯ ಒಂದು ಮಾದರಿಯಲ್ಲೇ ರದೀಪ್, ಕಾಫಿಯಾಗಳನ್ನು ಬಳಸಿಕೊಂಡು ಬರೆಯುವ ಗಜಲ್ , ಜುಲ್ ಕಾಫಿಯಾ ಗಜಲ್ ಎರಡೆರಡು ಕಾಫಿಯಾಗಳನ್ನು ಒಳಗೊಂಡ ಗಜಲ್ ಸಂಪೂರ್ಣ ಮತ್ಲಾಗಜಲ್ ಗಜಲ್ ನ ಎಲ್ಲಾ ಶೆರ್ ಗಳು ಮತ್ಲಾ ರಚನೆ ಹೊಂದಿದ್ದರೆ ಅದು ಸಂಪೂರ್ಣ ಮತ್ಲಾಗಜಲ್  , ಮುಸಲ್ ಸಲ್  ಗಜಲ್  ಒಂದೇ ವಿಷಯವನ್ನು ಒಳಗೊಂಡ ಗಜಲ್ . ಚೋಟಿ ಬೆಹರ್ ಗಜಲ್ ಚಿಕ್ಕ ಬೆಹರ್ ಹೊಂದಿರುವ ಗಜಲ್. ಸೆಹ್ ಗಜಲ್ ಗಜಲ್ ಬೇಗ ಮುಗಿಯದೆ ಮತ್ತು ಇನ್ನೊಂದನ್ನು ಬೆಳೆಸುತ್ತ ಹೋಗುವ ಗಜಲ್.   ಗಜಲ್  ಹೀಗೆ ಅನೇಕ ಪ್ರಕಾರದ ಗಜಲ್ ಗಳನ್ನು ಅವುಗಳ ನಿಯಮಕ್ಕೆ ಒಂದಿನಿತೂ ಕೊರತೆ ಬರದಂತೆ ಗಜಲ್ ಆಗಿ ನಿರೂಪಿಸುತ್ತಾರೆ. ಈಶ ಅವರ ಕಾವ್ಯನಾಮ (ತಖಲ್ಲುಸ್) ಆಗಿರುತ್ತದೆ.

ಯಾವುದೆ ವಿಷಯವಾಗಲಿ ಅದು ಮನದ ಮೂಲಕವೇ ಆರಂಭವಾಗಬೇಕಲ್ಲವೇ? ಮನದ ಮಹಿಮೆಯನ್ನು ಮೊದಲ ಗಜಲ್ ನಲ್ಲಿಯೆ ಸಾರುವ ಕವಿ  ಮನದಲ್ಲಿ ಕವಿತೆ ಅರಳಲು ಭಾವನೆಗಳು ಬೇಕು ಎನ್ನುತ್ತಾರೆ.

ಮನವು ಅರಳಲು ಭಾವನೆಯೆ ಸಾಕು
ಕನಸುಗಳು ಕಾಣಲು ಕಲ್ಪನೆಯೆ ಸಾಕು

ಎನ್ನುತ್ತಾರೆ  .ಹಾಗೆಯೇ ಸದಾ ಮನದಲ್ಲಿ ಸುಂದರ ಭಾವನೆಗಳಷ್ಟೆ ಬರುವದು ಸಾಧ್ಯವಿಲ್ಲ. ಅಲ್ಲಿ ಒಮ್ಮೊಮ್ಮೆ ರಣಕೇಕೆ ಹಾಕುವ ಭಾವನೆಗಳೂ ಮೂಡಬಹುದು . ಇದನ್ನು ಐದನೆಯ ಗಜಲ್

ಹೊರಗೆ ಶಾಂತವಿದೆ ಒಳಗೆ ಭಾವಗಳು ರಣಕೇಕೆ ಹಾಕುತಿವೆ
ಶ್ರಧ್ಧಾಂಜಲಿ ನಡೆದರೆ ನೋವುಗಳು ಕೋಲಾಟ ನಡೆಸಿವೆ

ಎನ್ನುತ್ತದೆ ಹೊರನೋಟಕಕೆ  ಮನಸ್ಸೇನೋ ನೋಡಲು ಶಾಂತವಿರುತ್ತದೆ. ಆದರೆ ಒಳಗೆ ನೂರೆಂಟು ಭಾವಗಳು ರೌದ್ರಾವತಾರದಿಂದ ಕುಣಿಯುತ್ತವೆ ಎನ್ನುವದು ಕವಿಯ ಸಂಕಟವಾಗಿದೆ.  ಮಾಗಿದ ಮಧುರ ಭಾವಗಳು ಗಜಲ್ ರೂಪ ಪಡೆದು ಮುದ ನೀಡುತ್ತವೆ.

ಮೌನಕೆ ಮಾತಾಗುತ ಉಸಿರಲಿ ಜೀವವಾಗುತ ಬರಬಾರದೆ
ಬಿಸಿಲಲಿ ತಂಪಾಗುತ ಹಸುರಿನಲಿ ಗೆಲುವಾಗುತ ಬರಬಾರದೆ (ಗಜಲ್ -೮)

ಎನ್ನುವದಾಗಲೀ

  ಮಧುರತೆ ಮನದಲ್ಲಿ ಹಗಲಿರುಳು ಕೊನರಿದೆ ಕವನ
  ಅಧರವು ಮುದದಲಿ ಎಡೆಬಿಡದೆ ಕೊಸರಿದೆ ಕವನ(ಗಜಲ್ -೯)

ಎಂಬಂತಹ  ಗಜಲ್ಗಳ ಮತ್ಲಾಗಳು ಸಾರುವ ಮಾಧುರ್ಯ ಗಜಲ್ ಗಳ ಸುಂದರತೆಯನ್ನು ಸಾರುತ್ತದೆ. ಇವರ ಗಜಲ್ ಗಳೊಳಗಿರುವ ಪ್ರಿತಿಯ ಪ್ರತಿಮೆಗಳನ್ನು ಕುರಿತು ಮುನ್ನುಡಿ ಬರೆದಿರುವ ಶಮಾ ಜಮಾದಾರ ಅವರು “ಯುವ ಮನಸ್ಸಿನವರೂ ನಾಚುವಂತೆ ಬಳಸಿದ ಪ್ರೀತಿಯ ..ಪ್ರತಿಮೆಗಳು ಗಝಲ್ ಗಳಿಗೆ ಹೊಸದಾದ ಘಮವನ್ನು ಕೊಡುವಂತಿವೆ “ ಎನ್ನುವದು ಸೂಕ್ತ ಮಾತೇ ಆಗಿದೆ. “ದುಂಬಿಯದು ಸುಮದ ಜೇನ ಸುರಿಸುತಿದೆ, ಅರೆಬಿರಿದ ತುಟಿಗಳಲಿ ಮುತ್ತು ಸುರಿಯುತಿದೆ “ (ಗಜಲ್-೧೦) ಇಂಥಹ ಸಾಲುಗಳ ಸೌಂದರ್ಯ ವಿವರಿಸುವದು ಕಠಿಣ.ಇಂತಹ ಹತ್ತಾರು ಉದಾಹರಣೆ ಉಲ್ಲೇಖಿಸಬಹುದು.

  ಬದುಕನ್ನೆ ಶಿಕ್ಷಕರಾಗಿ ಕಳೆದ ಸಂಪಗಾವಿಯವರು ನೀಡುವ  ಸಂದೇಶ ರೂಪದ ಗಜಲ್ ಗಳಿಗೆ ಒಂದು ವಿಶೇಷ ಅರ್ಥವಿರುವದು ಅನುಭವ ಸಂಪತ್ತಿನಿಂದ ದೊರೆತ ಲಾಭವಾಗಿದೆ. ಮನುಷ್ಯ ಯಾವುದಕ್ಕಾಗಿ ಹಣ ಗಳಿಸಬೇಕು ಎನ್ನುವದನ್ನು ಗಜಲ್ ಕವಿ

ಬದುಕಲು ಸಂಪಾದಿಸಬೇಕು, ವಿನಃ ಸಂಪಾದಿಸುವದಕ್ಕೆ ಬದುಕಬೇಡ ಮನುಜ ಜೀವಿ…


Leave a Reply

Back To Top