ʼಭಾವಗಳ ಬಲೆಯೊಳಗೆʼ ಸಂಬಂಧಗಳ ಕುರಿತಾದ ಲೇಖನ-ರೇವತಿ ಶ್ರೀಕಾಂತ್‌ ಅವರಿಂದ

ಮನಸು ಭಾವನೆಗಳ ಕಣಜ. ಮನಸು ತನ್ನ ಸುತ್ತಲಿನ ಸಂಬಂಧಗಳ ಸಾಮೂಹದಲ್ಲಿ
ಒಂದು ವ್ಯಾಪ್ತಿಯನ್ನು ನಿರ್ಮಿಸಿಕೊಳ್ಳುತ್ತದೆ. ಅದರಲ್ಲಿ first circle ಎಂದರೆ ನಾವು ನಮ್ಮನ್ನು ಗುರುತಿಸಿಕೊಳ್ಳುವುದಕ್ಕೆ ಆರಂಭಿಸಿದಾಗಿನಿಂದ ಯಾರನ್ನು ತುಂಬಾ  ಸಮೀಪದವರು ಎಂದು ಗುರುತಿಸಿಕೊಳ್ಳುವವರು ಎಂದರೆ ತಂದೆ ತಾಯಿ, ಸಹೋದರ ಸಹೋದರಿಯರು,….


2nd circle ನಲ್ಲಿ ಬರುವವರು ನೆಂಟರು ,ಸ್ನೇಹಿತರು, 3rd ಸರ್ಕಲ್ social contact. ಫೇಸ್ಬುಕ್
 ಅಥವಾ ವಾಟ್ಸಪ್ ಫ್ರೆಂಡ್, ಅಥವಾ ಸಹೋದ್ಯೋಗಿ.., ಹೀಗೆ ಮನಸು ತನ್ನ ಆದ್ಯತೆಗಳನ್ನು  ಸಂಬಂಧಗಳಿಗೆ ಅನುಸಾರವಾಗಿ ನಿರ್ಧಾರಿಸುತ್ತದೆ. ಅದಕ್ಕೆ ತಕ್ಕಂತೆ ಭಾವನೆಗಳ ತೀವ್ರತೆ ಇರುತ್ತದೆ. ಇದು ಒಂದು ಸಾಮಾನ್ಯ ನೋಟ.  ಎಷ್ಟೊವೇಳೆ ಸ್ನೇಹಿತರಲ್ಲೂ ಆ ತೀವ್ರತೆ ಇರಬಹುದು . ಈ ರೀತಿ ಭಾವ ತೀವ್ರತೆ ಸಂತೋಷ ಆಗಿರಬಹುದು ಅಥವಾ ದುಃಖವಾಗಿರಬಹುದು…..ನಮ್ಮ ಆತ್ಮೀಯರಿಗೆ ಆಗುವ ನೋವು ನಲಿವುಗಳಿಗೆ ನಾವು ತೋರಿಸುವ ಪ್ರತಿಕ್ರಿಯೆ ನಮ್ಮ ಸಂಬಂಧದ ಮೇಲೆ ಆಧಾರಿತವಾಗಿದೆ..ಇದರ ಮತ್ತೊಂದು ಮುಖವೆಂದರೆ ಅವರು ನಮ್ಮ ಬಗ್ಗೆ ತೋರಿಸುವ ಪ್ರತಿಕ್ರಿಯೆಗಳು ಸಹ ನಮ್ಮಮೇಲೆ ಪರಿಣಾಮ ಬೀರಲು ಸಂಬಂಧದ ತೀವ್ರತೆಯೇ ಕಾರಣ.

ನಮ್ಮಲ್ಲಿ ಆಡುವ ಅಸಂಖ್ಯ ಭಾವಗಳು ರಸಗಳು ಅನೇಕ ಕಲೆಯಲ್ಲಿ ಮನಸಿನ ಭಾವದ ಅಭಿವ್ಯಕ್ತಿಯನ್ನು ರಸಗಳೆಂದು ಕರೆಯಲಾಗಿದೆ. ಪ್ರಮುಖವಾದ ಭಾವಗಳೆಂದರೆ ಪ್ರೀತಿ ಮತ್ತು ಕೋಪ. ಎಲ್ಲಾ ಭಾವಗಳೂ ಈ ಎರಡರ ವಿಸ್ತಾರ. ಪ್ರೀತಿ ಹೇಗೆ ಎಲ್ಲಾ ಸಂಬಂಧಗಳನ್ನು ಕಟ್ಟಿಕೊಡುತ್ತದೆಯೋ ಹಾಗೇ ಕೋಪ ಮಿತಿ ಮೀರಿದರೆ ನಾಶಕ್ಕೆ ಕಾರಣವಾಗುತ್ತದೆ. ಮುಂದಿನ  ಭಾಗಗಳಲ್ಲಿ ಪ್ರೀತಿಯ ವಿಸ್ತಾರ, ಅದರಲ್ಲಿ ವಿಕೃತ ರೂಪ ಹಾಗು ಕೋಪದ ವಿಕೃತ ರೂಪ ಎರಡನ್ನೂ ಚರ್ಚಿಸೋಣ.


Leave a Reply

Back To Top