ಕಾವ್ಯ ಸಂಗಾತಿ
ಜಯದೇವಿ ಆರ್ ಯದಲಾಪೂರೆ
ʼನೆಲ ಮೂಲದ ತಾರೆʼ


ಭಾರತ ಮೂಲದ ಮಗಳು
ಗಂಡೆದೆಯ ದಿಟ್ಟ ಧೀರ ನಾರಿ
ಸುನಿತಾ ವಿಲಿಯಮ್ಸ್ ಬುಚ್ ವೀಲ್ಮೋರಗೂಡಿ
ಪಯಣಿಸಿದಳು ಬಾಹ್ಯಾಕಾಶಕ್ಕೆ
ವಾರದೋಳಗೆ ಮರಳಬೇಕೆಂದವರಿಗೆ
ಗಗನನೌಕೆಯ ತಾಂತ್ರಿಕ ದೋಷದಿ
ಇರಬೇಕಾಯಿತು ಸಾವಿನ ಗುಹೆಯೋಳಗೆ
ಅರಿಯಲೋದ ಚಂದ್ರನಂಗಳದಲ್ಲಿ
ಸಾವಿಗೆ ಸವಾಲು ಹಾಕಿ
ಚಂದ್ರಿಕೆಯ ಗರ್ಭದಲ್ಲಿ
ನವಮಾಸದಿ 19/3/2025 ರಂದು
ಭೂಮಿಗಿಳಿದು ಪೂರ್ನಜನ್ಮ ಪಡೆದ ಧೀರೆ
ಏನು ಸಿಗದ ಲೋಕದಲ್ಲಿ
ಪ್ರಾಣಿಗಳು ಕಾಣದ ಜಗದಲ್ಲಿ
ಹೃದಯ ಬಿಗಿದಪ್ಪಿ ಉಸುರಿಸಿದಳು
ಬೆಳಕು ಕಾಣುವ ಛಲದಿ
900 ಗಂಟೆ ಸುಧಿರ್ಘ ಸಂಶೋಧನೆದಿ
150 ಕ್ಕೂ ಹೆಚ್ಚು ಪ್ರಯೋಗಗಳು
ಮುಂದಿನ ತಲೆಮಾರಿಗೆ ಸ್ಫೂರ್ತಿ ಸೆಲೆಯಾಗಿ
ಭಾರತದ ಪತಾಕೆ ವಿಶ್ವದಿ ಮೆರೆದಳು
ಜಯದೇವಿ ಆರ್ ಯದಲಾಪೂರೆ
