
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಜೀವನ ಚರಿತ್ರೆಯತ್ತ ಸಾಗಲಿ…

[ನಮ್ಮ ಮೆದುಳನ್ನು ನಾವು ಪುನಃ ರಿಪೇರಿ ಮಾಡಿ ನಮಗಿಷ್ಟ ಬಂದಂತೆ ಓದುವುದಿದ್ದರೆ ನಮ್ಮ ಬದುಕು ಹೀಗೆ ಇರುತ್ತಿತ್ತಾ….? ಎಂಬ ಪ್ರಶ್ನೆ ಸದಾಕಾಲ ಗೊತ್ತಿದ್ದು ಗೊತ್ತಿಲ್ಲದೆ ಕಾಡುತ್ತಲೇ ಇರುತ್ತದೆ.ಮನುಷ್ಯನ ಜೀವಿತಾವಧಿ ನಿರೀಕ್ಷೆಯು ಈ ಮೆದುಳು ಸಕ್ರಿಯತೆಯ ಮೇಲೆ ಅವಲಂಭಿಸಿದೆ.. ಜೀವ ವಿಜ್ಞಾನದ ಸಂಶೋಧನೆ ತನ್ನ ನಿಖರ ಮಾಹಿತಿ ನೀಡಿದಾಗ್ಯೂ ಅವಿಸ್ಮರಣೀಯ ಘಟನೆಗಳು ನಡೆಯುತ್ತಲೇ ಇವೆ. ಸತ್ತ ವ್ಯಕ್ತಿಯ ಸ್ಮಶಾನದಲ್ಲಿ ಎದ್ದು ಕುಳಿತ ಉದಾ..ನಮ್ಮ ಮುಂದೆ ಸಾಕಷ್ಟಿವೆ..
ನಮ್ಮ ಶರೀರ ಯಾರ ಅಧೀನ ಎಂಬ ಪ್ರಶ್ನೆ ಕಾಲಾತೀತ!. ಮೆದುಳನ್ನು ಕೊಂಚಹೊತ್ತು ಪರಿಶೀಲನೆ ನಡೆಸಿ ನಂತರ ಪುನಃ ಯಥಾವತ್ತಾಗಿ ಜೋಡಿಸುವ ಕೆಲಸ ಮಾಡಿದರೆ ಮುಗಿತು, ಅದು ಮತ್ತೆ ಮೊದಲಿ ನಂತೆ ಕೆಲಸ ನಿರ್ವಹಣೆ ಮಾಡುತ್ತದೆ. ಎಷ್ಟು ಖುಷಿ ನೋಡಿ..ಈ ರೀತಿ ಉಹಿಸಿದರೆ ಸಾಕು..! ಇದು ಸಾಧ್ಯವಿಲ್ಲ ಅಂತ ಗೊತ್ತು.ಕಲ್ಪನೆ ಬರೀ ಕಲ್ಪನೆ ಅಷ್ಟೇ..ಇಡೀ ಶರೀರದ ರಿಮೋಟ್ ಕಂಟ್ರೋಲ್ ಮೆದುಳು..ಇದು ಸರಿಯಿದ್ದರೆ ಎಲ್ಲಾ. ನಿಖರ.
ಫೇಸ್ ಬುಕ್ ಓಪನ್ ಮಾಡಿದಷ್ಟು..ಚಿಂತನೆಗೆ ಒರೆಹಚ್ಚುವಷ್ಟು ಬರಹಗಳು ಸಾಕಷ್ಟು!. ಓದಿದಷ್ಟು ತಲೆ ಬಿಸಿ…ಹೌದಪ್ಪ ಇದೆಲ್ಲ ಯಾಕೋ..ಅನ್ನುವಷ್ಟು ವಿಷಯಗಳು ಹಾದುಹೋಗುತ್ತವೆ.ನಮಗೆ ಬೇಕಾದುದನ್ನು ಮಾತ್ರ ನಾವು ಸ್ವೀಕರಿಸಬಹದೇನೋ..ಮೊಬೈಲ್ ಅವಾಂತರಗಳು ಒಂದಾದರೆ,ಸಂಸಾರದ ಅವಾಂತರಗಳು ಆಕ್ಟೋಪಸ್ ತರ ಎಲ್ಲ ರಂಗದಲ್ಲಿ ತಲೆಯೆತ್ತಿ ನಿಂತಿವೆ.ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರ ಜಟಾಪಟಿ ಸುದ್ದಿ ಕೇಳಿ ಮನಸ್ಸು ತಣ್ಣಗಾತು!. ಜಡೆಗಳು ಕೂಡಿದಲ್ಲಿ ಜಗಳಗಳು ಫಿಕ್ದ್!. ಅನ್ನೊ ಮಾತು ಸುಳ್ಳಾಗಲಿ ಎಂದಷ್ಟು ಹುಸಿಯಾಗುತ್ತ ಸಾಗಿವೆ…ಮಹಿಳೆ ಯನ್ನು…ಇಳೆಗೆ ಹೋಲಿಸಿ,ಧರೆಯಷ್ಟು ತಾಳ್ಮೆ ಲಭಿಸಲೆಂಬ ಪ್ರಾರ್ಥನೆ. ಮನೆ ಮನ ಇವೆಲ್ಲ ಮಹಿಳೆಗೆ ನೀಡಿದ ಅಗ್ರಸ್ಥಾನ.ಅವಳೆಂದಿಗೂ ಕೋಪಗೊಳ್ಳುವುದಿಲ್ಲ,ಕುಪಿತದ ಕ್ಷಣಗಳು ಇಡೀ ಪ್ರಪಂಚವನ್ನು ವಿನಾಶದ ಹಂತಕ್ಕೆ ತಲುಪಿಸುತ್ತವೆ ಮಹಿಳೆ – ಪ್ರಕೃತಿ ಇವು ಪ್ರಪಂಚದ ಅತ್ಯಂತ ಮತ್ತು ಅಪರೂಪದ ಅಂಗವೆಂದರೆ ತಪ್ಪಿಲ್ಲ!.
ನಮ್ಮ ಸುತ್ತಮುತ್ತಲು ನಡೆಯುತ್ತಿರುವ ಆಗುಹೋಗುಗಳ ಮೇಲೆ ಬೆಳಕು ಚಲ್ಲುವ ಕಾರ್ಯ ನಾವು ಮಾಡಬೇಕು.. ಅನ್ನುವಷ್ಟರಲ್ಲಿ ಇನ್ಯಾರೋ ನಮ್ಮೊಳಗಿನ ಚಿಂತನೆಯನ್ನು ಕದ್ದುಬಿಡುವ ಹಂತ ತಲುಪಿದೆ ಉಹಿಸಿದಷ್ಟು ಸುಲಭವಾಗಿ ಯಾವ ಕಾರ್ಯವು ನಡೆಯುವುದಿಲ್ಲ. ವೃದ್ಧ ತಂದೆ ತಾಯಿಯನ್ನು ನೋಡದ ಮಕ್ಕಳಿಗೆ ಬಿಸಿ ತಟ್ಟಲಿದೆ!. ಆಸ್ತಿಗಾಗಿ ಹೆತ್ತವರ ಎದೆಬಗೆದು ಮೌನವಾಗಿ ಅವರು ಅಂತ್ಯದತ್ತವಾಲುತ್ತಿರುವುದು ದುರಂತವೇ ಸರಿ!.ಏನ್ ಹೇಳುವುದು..ಆಸ್ತಿ ಅಂತಸ್ತಿನ ವಿಚಾರ ಬಂದಾ ಕ್ಷಣ ಹೆತ್ತವರನ್ನು ಸಮಾಧಿಯಾದರೂ ಮಾಡಿ ಆಸ್ತಿ ತಮ್ಮದಾಗಿಸಿಕೊಳ್ಳುವ ಕ್ರೂರತನದತ್ತ ಸಾಗುತ್ತಿರುವುದು ಮಾತಿಲ್ಲದ ಸಂದೇಶವಿದು.ಮಕ್ಕಳು ಹೆತ್ತವರ ನೋವು ನೋಡಲೇಯಿಲ್ಲ..ಅವರ ತ್ಯಾಗ ಅವರಿಗೆ ಗೊತ್ತಾಗದಿರುವುದೇ ಇದಕ್ಕೆಲ್ಲ ಕಾರಣ!. ಸುಖದಲ್ಲಿ ಬೆಳೆದವರಿಗೆ ಕಷ್ಟ ಅಷ್ಟು ಸುಲಭವಾಗಿ ಒಪ್ಪಿಕೊಳ್ಳದ ಸ್ಥಿತಿ ಮಾಡಿದ್ದರ ಪರಿಣಾಮ!. ಹೆತ್ತವರಿಗೆ ಮಕ್ಕಳ ಭವಿಷ್ಯ ತಿದ್ದಿ ತೀಡುವುದರಲ್ಲೇ ಅವರ ಆಯಸ್ಸು ಮುಗಿದು ಮೂಲೆ ಸೇರಿದ ಮೇಲೆ,ಕಾಯಿಲೆಗಳಿಗೆ ಒಳಗಾದರೆ ಅವರ ಆರೈಕೆ ರಕ್ಷಣೆಯ ಜವಾಬ್ದಾರಿ ಮಕ್ಕಳದ್ದು.ಆದರೆ ಅವರನ್ನು ವಿಚಾರಿಸದೇ,ಆರೈಕೆ ಮಾಡದೇ ನಿಷ್ಕಾಳಜಿ ಮಾಡುವ ಮಕ್ಕಳಿಗೆ ತಕ್ಕ ಶಿಕ್ಷೆಯಾಗಬೇಕು.ಅದು ಹೆಣ್ಣಿರಲಿ,ಗಂಡಿರಲಿ,ಆಸ್ತಿ ಬೇಕು,ಹೆತ್ತವರು ಬೇಡವೆಂದರೆ ಹೇಗೆ? ಎಲ್ಲರೂ ಸ್ವಾರ್ಥಿಗಳಾದರೆ ಹೆತ್ತವರು ಯಾಕಪ್ಪಾ ನಾವು ಮಕ್ಕಳನ್ನು ಹೆತ್ತೆವು? ಮಕ್ಕಳಿಲ್ಲ ಎಂಬ ಕೊರತೆ ಬಿಟ್ಟರೆ ಬೇರೆ ಯಾವ ಚಿಂತೆ ಇಲ್ಲವೆಂದು ಕೊರಗುತ್ತಿರುವ ದೃಶ್ಯ ಈಗೀಗ ಸಾಮಾನ್ಯವಾಗಿ ಬಿಟ್ಟಿದೆ.ಕಾನೂನು ಕಠಿಣವಾದರೂ ಫಲ ಶೀಘ್ರವಾಗಿ ತಲುಪದೇ ಇರುವುದು ಇದಕ್ಕೆ ಕಾರಣವಿರಬಹುದು.ಕೋರ್ಟ್ ಕಚೇರಿ ಅಲೆಯು ತಾಕತ್ತು ಯಾರಿಗಿದೆ?…
ಒಟ್ಟಾರೆಯಾಗಿ ಹೇಳುವುದಾದರೆ ಬದುಕು ನಾವು ಏಣಿಸಿದಂತೆ ಇರದು.ಹೀಗಿರುವಾಗ ಎಲ್ಲವನ್ನೂ ಸಮದೂಗಿಸಲು ಎಲ್ಲವೂ ಸರಿಯಾಗಿ ನಿಲುಕುವ ಸ್ಥಿತಿ ನಮಗಿರಬೇಕು.ಜೀವನದ ಎಲ್ಲ ರಂಗದಲ್ಲಿ ನಾವು ಅಹಂ ನ ಸಂಗಾತಿಯಾಗದೇ ಎಲ್ಲರೊಂದಿಗೆ ಬೆರೆವ ಚರಿತ್ರೆಯ ಮುನ್ನುಡಿಯಾಗಬೇಕು.ಆಸ್ತಿ ಅಂತಸ್ತಿನ ಆಸೆಗೆ ಕೊಲೆ ಸುಲಿಗೆ ದರೋಡೆ ಎಲ್ಲ ಅವ್ಯಾಹತವಾಗಿ ನಡೆದುದರ ಫಲ,ಮಾನವೀಯ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ ಬದುಕುವ ಜೀವನ ನಮ್ಮದಾಗದಂತೆ ನೋಡಿಕೊಳ್ಳಬೇಕು…ಅಂದಾಗ ಮಾತ್ರ ಬದುಕಿದ್ದು ಸಾರ್ಥಕ/..ಜೀವನ ಚರಿತ್ರೆಯತ್ತ ಸಾಗಲು ನಾವೆಲ್ಲ ಒಳ್ಳೆಯ ಚಿಂತನೆಯತ್ತ ಬದಲಾಗಬೇಕು.
ಶಿವಲೀಲಾ ಶಂಕರ್

ತುಂಬಾ ಸೊಗಸಾಗಿ ಬರೆದಿದ್ದೀರಿ ಮೇಡಂ.ಪ್ರಸ್ತುತ ಪ್ರಪಂಚದ ಒಳ ಹರಿವನ್ನು ತೋರಿಸಿದ್ದೀರಿ.ಅಭಿನಂದನೆಗಳು.