ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್ ಬೇಲೂರು
“ವರುಣನಿಗೊಂದು ಕೋರಿಕೆ”

ಭಾಸ್ಕರನ ಕಡು ಕೋಪಕೆ
ತತ್ತರಿಸಿಹಳು ಧರಣಿ
ಬೆಂಡಾಗಿ ಬಸವಳಿದು
ಕಾದಿಹಳು ಸೆರಗೊಡ್ಡಿ
ಹಸಿರೊದ್ದ ವಸಂಧರೆಯ ಬೆಡಗು
ಬಣ್ಣ ಮಾಸಿದೆ ರವಿಯ ತಾಪಕೆ
ನಲಿದುಕ್ಕುವ ಜಲರಾಶಿ
ಗಂಟಲೊಣಗಿ ಬಿಕ್ಕುತಿವೆ
ಹಸಿರು ಗಿರಿ ದಟ್ಟ ಕಾನನ
ಮಬ್ಬಡರುತಿವೆ ತಾವಿಂದು
ತೇಲಿ ಮರೆಯಾಗುತಿಹ
ಮೇಘಗಳ ಕರೆಯುತಿವೆ
ಕೋಗಿಲೆ ಗಿಳಿ ಗೊರವಂಕಗಳ
ದಾಹ ತಣಿಯದಾಗಿದೆ
ಇನ್ನಾದರೂ ಕೃಪೆದೋರು ವರುಣ
ಚೆಲ್ಲು ಪ್ರೀತಿಯ ಹನಿಗಳ ಧರೆಗೆ
——————————————–
ಮಧುಮಾಲತಿರುದ್ರೇಶ್ ಬೇಲೂರು

ತುಂಬು ಧನ್ಯವಾದಗಳು ತಮಗೆ