“ಗುಬ್ಬಿ ಹುಡುಕುವ ಗೂಡು” ಸವಿತಾ ದೇಶಮುಖ ಅವರ ಹೊಸ ಕವಿತೆ

ಚಿನ್ನಾರಿ ಚಿಣ್ಣ ಗುಬ್ಬಚ್ಚಿ-“ಮನಸ್ಸು “
ಹೊತ್ತು ಆಸೆ ಅಳಲು – ಅಪರಮಿತ
ಗಗನ ಎತ್ತರಕ್ಕೆ ಹಿಗ್ಗುತ್ತ- ಉಬ್ಬುತ
ಮೇಲೆ ಮೇಲೆ  ಹಾರುವ- ಮತ್ತ್ತ…

 ತಗ್ಗಿ -ಬಗ್ಗಿ ಧರೆಗೆಳಿದು- ಧುಮಕುತ್ತ
ಸತತ ಹುಡುಕುತಿದೆ- “ಸುರಕ್ಷತೆ” ತಾಣ
ಹಮ್ಮು- ಬಿಮ್ಮ,ರಾಗ-ದ್ವೇಷ ಕಳೆದ
ಶಾಂತಿ ಸೌಖ್ಯದ ಗೂಡು ಹುಡುಕುತಿದೆ…



ಅನತಿ ದೂರದಿ ಕಂಡ ಕನ್ನಡಿ
ತನ್ನಿ‌ ಪ್ರತಿಬಿಂಬ-  ಕುಕ್ಕಿ ಕುಕ್ಕಿ
ಕಕ್ಕುಲತೆಯಲಿ- ಚುಂಚು ನೊಯಿತು
ಎನಿಸಿ -ಹುಸಿ ಭ್ರಮೆ- ಗೂಡಿನಾಸೆ….

ಬಿಡದ ಬಯಕೆ ಬೆನ್ನತ್ತಿ ಮತ್ತೆ ಮತ್ತೆ
ತಿರು ತಿರುಗಿ ವನ- ಬನಗಳಲಿ
ಚಿಕ್ಕ ಚೊಕ್ಕ ಗುಡಿಸಲ ಗೂಡಿನ
“ಆಸೆಯೆಂಬ “ಸಂಕಲ್ಪ ಮರಿಗಳ ಸಾಕಲು…

 ಹಂಬಲ ಬೆಳೆಸಿ ದೂರ ದಿಗಂತಕ್ಕೆ
ಹಾರುವ ಹಲ್ಗನಸಿನ ಗುಬ್ಬಚ್ಚಿ-ಮನಸ್ಸು
ಬೆಚ್ಚಗೆ ಕಾಪಿಟ್ಟು ಮರಿಗಳ ರೆಕ್ಕೆಪುಕ್ಕೆಗಳ
ಚಿಗುರಿ ದಿಗ- ದಿಗಂತಕ್ಕೆ ಮುಟುವ -ಮನ

ಬಿರುಗಾಳಿ- ಚಂಡಮಾರುತ-ಎದೆ ಒಡ್ಡಿ
ಅಂಜದೆ ಅಳುಕದೆ, ಮರೆತು ದುಃಖವ
ಸುಂಟರ ಗಾಳಿಯ ಸುಳಿಯ ಸೆಳೆತ ದಾಟಿ
ಭದ್ರವಾದ ಗೂಡಿನ ಅನ್ವವೇಷಣೆ ಗುಬ್ಬಿ-ಮನ

ಅದೆಷ್ಟು ದೂರ ಪ್ರಯಣಿಸುತಿದೆ ಹುಡಕುತ
ಸ್ಥಿರವಾದ ಬೆಚ್ಚನೆಯ-“ಶಾಂತಿಯ‌”ಗೂಡು
“ಬದುಕುವ ಹೊಂಗನಸಿನ ಆನಂದ ಶುದ್ಧ
ಪರಿಶುದ್ಧ ಚಿತ್ತದ ಗೂಡು”


Leave a Reply

Back To Top