ಕಾವ್ಯ ಸಂಗಾತಿ
ಪ್ರಮೋದ ಜೋಶಿ
ನನ್ನ ರೂಪಿಸಿದ ದೇವರು

ಗುರು ನಿನ್ನ ಋಣ
ಮಣ ಭಾರವಿರುವುದು
ಹೆಣವಾದರೂ ತೀರದು
ಅಣುವಾಗಿ ಕಣವಾಗಿ
ಉಸಿರು ಉಸಿರಿನಲ್ಲೂ
ಜೊತೆಗೇ ಇರುವುದು
ಹೆತ್ತವರ ಜೊತೆ ಮತ್ತೋಬ್ಬ ನೀನು
ಬಾಳು ಬೆಳಗಲು
ಹರಸುವವನು
ಇಲ್ಲಾ ಮತ್ಯಾರು ನಿನ್ನಂತ ದೈವ
ತಂದೆ ತಾಯಿ ಹಾಗೆ
ದೈವ ನೀನು
ಅರುವಿನ ಅರಿವೆ ತೊಡಿಸಿ
ಬೆಳಕ ದಾರಿಯಲಿ ನಡೆಸಿ
ಹಿಂದೆಯೇ ನಿಂತು ನೋಡುವೆ ನೀನು
ತನು ಮನ ಬೆಳೆಯಲು
ನಿನ್ನ ತನು ಸವೆಸಿ
ಹರಸುವವನೊಬ್ಬ ನೀನು
ಮೂರ್ತಿ ರೂಪಿಸಿದ ಶಿಲ್ಪಿ ನೀನು
ಮರೆಯಲುಂಟೇ ನಿನ್ನನು
ಧನ್ಯತೆಯಲಿ ನೆನೆವೆ ಸದಾ ನಿನ್ನನು
ನನ್ನ ರೂಪಿಸಿದ ದೇವರನ್ನು
ಪ್ರಮೋದ ಜೋಶಿ

ನಿಜಯಾರಿಲ್ಲದಿದ್ದರೂ ಅವನು ಮಾತ್ರ ಸದಾಜೊತೆಯಲ್ಲಿರುವವನು ಅಥ೯ ಪೂರ್ಣ ಕವನ.ತುಂಬಾ ಚೆನ್ನಾಗಿದೆ