ಕಾವ್ಯ ಸಂಗಾತಿ
ಎ.ಎನ್.ರಮೇಶ್. ಗುಬ್ಬಿ
“ಉಗ್ರ ಪ್ರತಾಪಿ.!”

ಮದುವೆಯ ಮರುದಿನ
ಬಾಯಿಗಿಡುತ್ತಿದ್ದಂತೆ…
ನನ್ನವಳ ಕೈಯಡುಗೆ
ಕೋಪವುಕ್ಕಿತು ಮೈಯೊಳಗೆ
ಸಿಡಿಮಿಡಿಯಲಿ ಅರಚಿದೆ
ಬಾಯಿಗೆ ಬಂದಹಾಗೆ..!
ಅವಳೇನು ಕಡಿಮೆಯೇ..?
ಇನ್ನೆಂದು ಅಡಿಗೆಯೇ
ಮಾಡುವುದಿಲ್ಲವೆಂದು
ಬಿಸುಟಳು ಸೌಟನು
ಅಡುಗೆಮನೆಯಿಂದಾಚೆಗೆ.!
ಹೊರಟುನಿಂತಳು ತೌರಿಗೆ!!
ಉಗ್ರಪ್ರತಾಪಿ ನಾನು..!
ಅವಳಿಗೇನು ಕಮ್ಮಿ..??!
ಉಗ್ರಕೋಪದಿ ಸೌಟು
ಹಿಡಿದು ನಡೆದೆ ಒಳಗೆ.!!
ಅವಳೆದುರು ನಿಂತು
ಮಾಡಿಯೇಬಿಟ್ಟೆ ಶಪಥ.!
ಕೊನೆಯುಸಿರಿರುವತನಕ
ಇನ್ಮುಂದೆ ಮನೆಯೊಳಗೆ
ನಾನೆ-ಮಾಡುವೆ ಅಡಿಗೆ.!
ಹೋಗದಿರು ನೀನೆಂದು
ನನ್ನ-ಬಿಟ್ಟು ತವರಿಗೆ..!!
——————————————-
ಎ.ಎನ್.ರಮೇಶ್. ಗುಬ್ಬಿ.
