ಭಾರತಿ ರವೀಂದ್ರ ಅವರ ಕವಿತೆ

ಮಾತುಗಳ ಮಧುರತೆ ಕಿವಿಯಲಿ
ಉಲಿಯಲು  ಬಂದೆಯಾ ಗೆಳತಿ
ಗಾನಗಳ ಕವಿತೆಯನು ಹೃದಯದಲಿ
ಮೆರೆಸಿ ನಿಂದೆಯಾ ಗೆಳತಿ

ಹೊಸತನ ಅರಸುತ ಸ್ನೇಹವನು
ನೀಡಿದೆಯಾ ಹೇಳು
ಬಿರುಸುತನದಲಿ ಮೃಧುವಾದ
ಚಿಂತನೆಯಾ ತಂದೆಯಾ ಗೆಳತಿ



ಕಣ್ಣಿನ ನೋಟದಲಿ ಸವಿ
ನೆನಪನು ಪಡೆದೆಯಾ ಸಖಿ
ಹಣ್ಣಿನ ಬಣ್ಣದಲಿ ಪ್ರೀತಿಯ
 ಬರೆದು ತಿಂದೆಯಾ ಗೆಳತಿ

ಕೆಟ್ಟ ಸಂಪ್ರದಾಯದ ಆಚರಣೆಯ
ಬದಿಗಿರಿಸಿ ಮೆರೆದೆಯಾ
ಕೊಟ್ಟ ವಚನವ ಮರೆತು
ಪಟ್ಟು ಹಿಡಿದು ಮಿಂದೆಯಾ ಗೆಳತಿ

ಸೂರ್ಯರಶ್ಮಿ ತಂಪಾಗಿ ಮೈಸೋಕಲು ತಾವರೆ ಅರಳದಿ
ಸುಂದರ ಕನಸುಗಳು ಮೈದುಂಬಿ
ಚಿಟ್ಟೆಯ ಜೊತೆ ನಿಂದೆಯಾ ಗೆಳತಿ
————————

Leave a Reply

Back To Top