ಹವ್ಯಾಸಕ್ಕಾಗಿ ಪ್ರಾಣಿ ಪಕ್ಷಿಗಳನ್ನ ಸಾಕುವವರು ಸರ್ಕಸ್ಸಿನವರು, ಹೊಟ್ಟೆಹೊರೆಯಲು ಪಳಗಿಸಿದ ಪ್ರಾಣಿಗಳನ್ನು ಆಡಿಸುವವರು, ಇಲ್ಲವೇ ಪ್ರಾಣಿ ಸಂಗ್ರಹಾಲಯದವರು ,” ಕೋಲ” ಎಂಬ ಜಾತಿಯ ಕರಡಿಗಳನ್ನು ಮಾತ್ರ ಸಲುಹಲು ಮುಂದಾಗು (ಸಾಧ್ಯವಾಗು) ವುದೇ ಇಲ್ಲ. ಏಕೆಂದರೆ ಆ ಕರಡಿಯ ಆಹಾರ ಸಮಸ್ಯೆ.
.
ಆನೆಗಳಂತಹ ಬಲಾಢ್ಯ ಪ್ರಾಣಿಗಳನ್ನೇ ಸಾಕಲು ಮನುಷ್ಯ ಮುಂದಾಗಿರುವಾಗ ಈ ಕುಬ್ಜ ಕರಡಿಯದು ಎಂಥ ಸಮಸ್ಯೆ ಎನ್ನುತ್ತೀರಾ ?

ಅದರದು “ ವಿಶೇಷ ಭಕ್ಷದ “ ಸಮಸ್ಯೆ. ಅದರ ಆಹಾರ ಕ್ರಮವೇ ಸಾಕುವವರಿಗೆ ಸಾಕು ಮಾಡುತ್ತದೆ.

ಆಸ್ಟ್ರೇಲಿಯಾದ ನೆಲದಲ್ಲಿ ವಾಸಿಸುವ ಈ “ಕೋಲ “ ಕರಡಿಗಳು ಎಣ್ಣೆ ಪದಾರ್ಥವಿರುವ ಆಹಾರದ ಎಲೆಗಳನ್ನು ಮಾತ್ರವೇ ತಿನ್ನುತ್ತವೆ. ಹೀಗಾಗಿ ಅವುಗಳಿಗೆ ನಿತ್ಯ ಅಂತಹ ಎಲೆಗಳನ್ನ ಹುಡುಕಿ, ಹರಿದು ತಂದು ಪೂರೈಸುವುದು ಮೃಗಾಲಯದವರಿಗೆ ಸಮಸ್ಯೆ ಆಗುತ್ತದೆ. ಏನಿಲ್ಲವೆಂದರೂ ದಿನವೊಂದಕ್ಕೆ ಕನಿಷ್ಠ ಒಂದು ಕಿಲೋ ಗ್ರಾಮದಷ್ಟಾದರೂ ಎಣ್ಣೆ ಎಲೆಗಳನ್ನು ಬೇಡುವ ಈ ಸಮಸ್ಯೆಕೋರರಿಗೆ ದಿನಂಪ್ರತಿ ಅಂತಹ ಆಹಾರವಾದರೂ ಸಿಗುವುದೆಲ್ಲಿ? ಇದು ಮೃಗಾಲಯದ ಅಧಿಕಾರಿಗಳ ತಲೆ ತಿನ್ನುತ್ತದೆ.

ಆಸ್ಟ್ರೇಲಿಯಾದ ಭೂ ಪ್ರದೇಶದಲ್ಲಿ ಕಂಡುಬರುವ 400ಕ್ಕೂ ಹೆಚ್ಚಿನ ವಿಧದ ನೀಲಗಿರಿ ( ಎಣ್ಣೆ) ಮರಗಳಿದ್ದು, ಅವುಗಳಲ್ಲಿ ಕೆಲವೇ ಸಂಖ್ಯೆಯ ಗಿಡಗಳು “ ಕೋಲ” ಗಳಿಗೆ ಬೇಕಾದಂತಹ ಆಹಾರವನ್ನು ಒದಗಿಸುತ್ತವೆ.

ಇಷ್ಟೆಲ್ಲದರ ಮಧ್ಯೆ ಮೂಲ ಸಮಸ್ಯೆಯೊಂದರ ಕಾರಣದಿಂದಲಾದರೂ “ ಕೋಲಾ “ ಕರಡಿಗಳು ಮಾನವರ ಅಂಕೆ ( ಕೈ ) ಗೆ ಬಾರದೆ, ಸಿಕ್ಕದೆ ಕೋಲಿನಾಟಗಳಿಗೆ ಮಣಿಯದೆ, ಶೋಷಣೆಗೆ ತುತ್ತಾಗದೆ ನಿಸರ್ಗದ ಮಡಿಲಲ್ಲಿ ಮನಬಂದಂತೆ ಸ್ವತಂತ್ರವಾಗಿ ಅಡ್ಡಾಡಿಕೊಂಡಿರುವ ಸೌಭಾಗ್ಯ ಸಂಧಿರುವುದೇ ಪ್ರಾಣಿ ಪ್ರಿಯರಿಗೆ ಸಂತಸದ ವಿಷಯ.


Leave a Reply

Back To Top