ಕಾವ್ಯ ಸಂಗಾತಿ
ನಿರಂಜನ ಕೆ ನಾಯಕ
ಸೇತುವೆ ಮತ್ತು ಮನ

ನಿಂತಿದೆ ಸೇತುವೆ
ತನ್ನ ಕದಂಬ
ಬಾಹುಗಳ ಚಾಚಿ
ಕಾಣದ ಆಳದಿ
ತನ್ನ ಕಾಲುಗಳ ಹೂತು!!
ಕಾಲದ ಕುಲುಮೆಯಲಿ
ಕಾದು ಬಲಿತು!!
ಬೀಸುವ ಗಾಳಿ
ತಂಪೆರೆವ ಹಿಮ
ಸುಡುವ ಬಿಸಿಲು
ಎಲ್ಲವೂ ಹಿತವೇ
ಪ್ರಕೃತಿ ಜೊತೆಗಿಲ್ಲ
ಯಾವುದೇ ಹಗೆ!!
ಏಕಾಂತ ಧ್ಯಾನದ
ನಿಲುವಿನ ಬಗೆ!!
ಯಾವ ಕಾಲವಾದರೇನು?
ಯಾರ ಬಂಡಿ ಹೋದರೇನು?
ಅಲುಗದೇ ಅಚಲ
ತನ್ನ ಕಾಯಕದ
ನೀತಿಗೆ ಜೋತು
ಚಿಂತಿಸದೆ ಇಹಪರಗಳ
ಎಣಿಸದೇ ಇರುಳುಗಳ
ನಿನ್ನೆಗೆ, ಇಂದಿಗೆ ಮತ್ತು ನಾಳೆಗೆ!!
ನಿರಂಜನ ಕೆ ನಾಯಕ
