ಕಾವ್ಯ ಸಂಗಾತಿ
ಶಿ ಕಾ ಬಡಿಗೇರ ಕೊಪ್ಪಳ
ಬಾಲ್ಯವೆಂಬುದು…

ಹೊತ್ತು ಮೀರಿ ಕತ್ತಲಾದ ಮೇಲೆ
ನನಗೆ ಮಗುವಾಗುವ ಆಸೆ ಹುಟ್ಟಿದೆ
ಬಾಲ್ಯದ ನಗು ಮತ್ತೆ ಹುಲ್ಲಾಗಿ ಚಿಗುರಲಿ…
ಒಡನಾಡಿಗಳ ಹಿಂಡಿನಲ್ಲಿ ನಡೆದಾಡುವ ಹುಮ್ಮಸ್ಸು ಬಲು ಹಿಗ್ಗಿನದು; ಬೆನ್ನು ಚಪ್ಪರಿಸುತ್ತ ಹುಗ್ಗಿ ಉಂಡ ಬಾಲ್ಯ ಮತ್ತೆ ತಿರುಗಿ ನೋಡಲಿ…
ಹಾವು ರಾಣಿಯನ್ನೇ ಹಾವೆಂದು ಬಗೆದು ಎದೆ ಝಲ್ಲೆನಿಸಿಕೊಂಡು
ಮಾರುದ್ದ ಜಿಗಿದು ಓಟ ಕಿತ್ತ ದಿನ
ಹಿರಿಯರ ಬೈಗುಳದ ಮಳೆ…
ಬಾಲ್ಯ ಎಂಥ ಸುಖದ ಸುಪ್ಪತ್ತಿಗೆ!
ಹಳಸಿದ ಅನ್ನವೂ ನೃಷ್ಟಾನ್ನಗಳಲ್ಲಿ
ಒಂದಾಗಿತ್ತು; ಬಾಲ್ಯ ನನ್ನ ಗೆದ್ದಿತ್ತು
ಶಿ ಕಾ ಬಡಿಗೇರ, ಕೊಪ್ಪಳ
