ಕಾವ್ಯ ಸಂಗಾತಿ
ಡಾ.ಲಲಿತಾ.ಕೆ ಹೊಸಪ್ಯಾಟಿ
ತನಗಗಳು

ಗುರು ಅರವಿಂದರು
ಬೇಂದ್ರೆ ಕಂಡ ಚೇತನ
ಅನುಭಾವ ದರ್ಶನ
ಶುದ್ಧ ಅಂತಃಕರುಣ
ಗೋದುತಾಯಿ ಅಜ್ಜಿಯು
ಜೀವಕ್ಕ ಜೀವ ಬಾಳ
ಬೇಂದ್ರೆಯೊಳು ಕರುಳ
ಆಶೀರ್ವಾದ ಬಹಳ
ವ್ಯಾಕುಲತೆ ಹರಿದು
ಸಚಿತ್ತದಿ ಬರೆದು
ಗಾರುಡಿಗರಾದರು
ಕಾವ್ಯ ಸಿದ್ಧಿ ಪಡೆದು
ನಾಕುತಂತಿ ನುಡಿಸ್ರಿ
ನಾದಲೀಲೆ ತಿಳ್ಕೋಳ್ರಿ
ಬೇಂದ್ರೆ ಹಾಡ ಕಲ್ಕೋರಿ
ಜೀವನವನ್ನ ಗೆಲ್ರಿ
ಅಗಲಿಕೆಯ ದುಃಖ
ಪದದೊಳಗ ತೀಡ
ಕಷ್ಟವನೆಲ್ಲ ದೂಡ
ಬಿಡುಗಡೆಗೆ ಹಾಡ
ಶಬ್ಧ ಗಾರುಡಿಗನ
ಪದಕೆಲ್ಲ ಜೀವಿತ್ತ
ಕವಿತಾ ಉಸಿರಾತ
ಅನನ್ಯ ಬೆಳಕಾತ

ಡಾ.ಲಲಿತಾ.ಕೆ ಹೊಸಪ್ಯಾಟಿ