ಕಾವ್ಯ ಸಂಗಾತಿ
ಸವಿತಾ ದೇಶಮುಖ
“ವಿಜ್ಞಾನವೇ ಓಡದಿರು”

ಓ ವಿಜ್ಞಾನವೇ ನಿಲ್ಲು ನಿಲ್ಲು ನಿಲ್ಲು…
ಇನಿತು ದೂರ ದೂರ..ದೂರ ಓಡದಿರು..
ನೀ…. ಪ್ರಕ್ರಿಯೆ- ಜ್ಞಾನದ ವಿಜ್ಞಾನ-ಖಣಿ
ವಿಸ್ಮಯಕಾರಿ ಅಮಿತ ಅನ್ವೇಷಣೇ
ಗಾಢ ಬ್ರಹ್ಮಾಂಡದಿ ಅವಿತ ಗಣಿ……
ಅಂತರ ಶ್ರೀಸ್ತ್ರೀಯ ಅಧ್ಯಯನವೇ
ಸರ್ವಕಾಲಕ್ಕೂ ಸ್ಥಿರ ಪರಿಷ್ಕರಣವೇ
ರಹಸ್ಯದ ವಿಜ್ಞಾನ ಜ್ಞಾನ-ಯಥಾರ್ಥವೇ
ನೀ…ಅದೆಷ್ಟೋ ನಿಗೂಢ ಭೇದಿಸಿದರೂ
ಜಗದ ಸೃಷ್ಟಿಕರ್ತನ ಕುರುಹ ಬಲ್ಲೆಯಾ..?
ಹಿಮ ಭರಿತ ಶಿಖರ,ಹೊಳಪುಳ್ಳ ನಕ್ಷತ್ರಗಳು
ಸ್ಪಟಿಕ ಸ್ಪಷ್ಟ ಮಿಂಚುಳ್ಳ ಸರೋವರಗಳು ಹುಲ್ಲುಗಾವಲಲಿ ಅರಳಿಸುವ ಹೂವುಗಳು
ಸಕಲ ಜೀವರಾಶಿಗಳಿಗೆ ಜೀವ ತುಂಬಿದ
ಸೃಷ್ಟಿ ಮೂಲ ಸತ್ಯಾಸತ್ಯತೆ ತಿಳಿಸಬಲ್ಲಿಯಾ…
ಪೃಥ್ವಿಯಲಿ ಅಡಕ ನಿಗೂಢ ಭೇದಿಸಿದೆ
ಭುವಿ ಒಳಗಣ ಹುದುಗಿದ ಅಗಣಿತ ಶೊಧಿ
ಧೃತರಾಷ್ಟ್ರನಿಗೆ ಸಂಜೆಯ ಕಣ್ಣ ಆದಂತೆ
ನೀನಾದೆ ನಮಗೆ ಕಣ್ಣು… ಓ ವಿಜ್ಞಾನವೇ
ಅತಿವೀವಕದ ಜೀವನ ಶೈಲಿ ಕೈಪಿಡಿಯು
ಜಗ ಜೀವನ ಸುಂದರ ಅತಿ ಸಲಿಸ-ಸುಲಭ….
ಈ ಜಗಕೆ ಬಣ್ಣ ರಾಗಗಳ ಗಂಧವೇರಿಸಿದ
ದೈವದ ನಿಗೂಡ ಬಿಡಿಸ ಬಲ್ಲೆಯಾ??
ಮನುಜರ ಹೃದಯವಿಂದಾರದಿ -ಅನುರಾಗ ತುಂಬಿದ ಅವನ್ಯ ಶಕ್ತಿಯ ಸಾಕ್ಷಿಯಾಗಿ ನಿಲ್ಲಬಲ್ಲೆಯಾ… ಎನಿತು ದೂರ ಓಡಿದರೂ
ಓ ವಿಜ್ಞಾನವೇ…. ನೀನಿನ್ನು ಅಪೂರ್ಣ & ಅರ್ಧ
ಅನುರಾಗ- ಆರುಮೆ-ಪ್ರೇಮ- ಶಾಂತಿ
ಸತ್ಯ ನಿತ್ಯತೆಯ… ಮುಂದು ಮುಂದು
ಓಡಲಾದಿತೆ ಓ ವಿಜ್ಞಾನವೇ….
—————————————————–
ಸವಿತಾ ದೇಶಮುಖ
