ಕಾವ್ಯ ಸಂಗಾತಿ
ಈರಮ್ಮ. ಪಿ. ಕುಂದಗೋಳ
ಮನದ ದೀಪ

ನಿ ಹಚ್ಚಿದೆ ಪ್ರೀತಿಯ
ಹಣತೆಯ ದೀಪವನ್ನು
ಎನ್ನ ಮನದಲ್ಲಿ
ಎದೆಂದೂ ಅರದಂತೆ
ನೋಡಿಕೊಳ್ಳುವೆನು
ನನ್ನ ಹೃದಯದಲ್ಲಿ!
ಪ್ರತಿ ಕ್ಷಣ ಪ್ರತಿ ದಿನ
ಕಾಯುವೆನು
ಸದಾ ಪುಟ್ಟ ಗುಡಿಯಲ್ಲಿ
ಬೆಳಗಿಸುವೆನು ಪ್ರೀತಿಯ ಜ್ಯೋತಿ ಯನು!!
ಕೊರಳ ಮಾಂಗಲ್ಯದಿ
ತೂಗುವ ಉಯ್ಯಾಲೆ ಯಲಿ
ನಿಮ್ಮ ಪಾದ ಸ್ಪರ್ಷದೊಳಗೆ
ಬಿಂಬಿಸುವ ಕಮಲದಂತೆ
ನಗುವೇನು ನಿಮ್ಮ ಮನದಲ್ಲಿ!
ನುಡಿಸಿದ ನಾಲಿಗೆಯಲ್ಲಿ
ಮುಡಿದ ಮಲ್ಲಿಗೆಯ
ಕಣ್ಣ ಬೆಳಕಿನ ಹನಿಯಂತೆ
ಪ್ರಜ್ವಲಿಸುವೆನು
ಸಿಂಧೂರ ಹಣೆಯಲ್ಲಿ!
ನಿನ್ನ ಕರೆಗೆ ಓಗೊಟ್ಟು
ಬರುವೆ ಬಾಳದಾರಿಯಲಿ
ಹುಣ್ಣಿಮೆಯ ಚಂದಿರನಾಗೆ
ಕುಣಿಯುವೆ ನಿನ್ನ ಒಲವಿನಲಿ!
ಮನೆಯ ಸಿರಿತನವ ಕಾಯುದು
ಮಕ್ಕಳ ಲಾಲನೆಯಲಿ
ಹಿರಿಯರ ಪೋಷಣೆಯಲಿ
ಕಿರಿಯರ ನಡೆಯೊಳಗೆ
ಮನೆತನದ ದೀಪವನು ಬೆಳಗಿಸುವೆ
ಸಂಸಾರವೆಂಬ ಸಾಗರದ ನೌಕೆಯಲಿ
ತೇಲಿಸುವೆನು ನಿ ಹಚ್ಚಿದ ದೀಪವನ್ನು!
ಈ.ಪಿ ಕುಂದಗೋಳ.
