ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
ಮಗುವೆ ನೀ ನನ್ನ ನಗುವೆ
ನಗುವಿನ ಕಿರಣ ಹೊಮ್ಮಿತು
ಹರುಷದ ಬೆಳಕು ಚಿಮ್ಮಿತು
ಇದು ಮಮತೆಯ ಆಲಿಂಗನವೆ
ಇದು ಕರುಳಿನ ಅನುಬಂಧವೆ
ಹಡೆದ ಕೂಸು ನನ್ನ ಕನಸು
ಕೊಂಡಿ ಕಳಚಿದ ಮನಸು
ಕಂದ ಬೆಸೆದ ಅನುರಾಗವು
ಚೈತನ್ಯದ ಹೊಳಪು ದಿನವು
ಆ ಮುಗ್ಧ ಭಾವದ ಮುಂದೆ
ನಾನೆಂದಿಗೂ ಶರಣಾದೆ
ಕಷ್ಟ ನೋವು ಬರಿದಾಯಿತು
ಆನಂದದ ಸ್ವರ ಮೀಟಿತು
ನನ್ನ ಕೆಲಸ ಕಾರ್ಯದ ನಡುವೆ
ನೀ ಕಿಲ ಕಿಲ ನಗುವ ಮಗುವೆ
ನಾ ಎಷ್ಟು ನೊಂದರು ಒಂದು ಕ್ಷಣ
ನೀ ದುಗುಡ ಮರೆಸುವೆ ಪ್ರತಿಕ್ಷಣ
ಸತೀಶ್ ಬಿಳಿಯೂರು