ಹಮೀದಾ ಬೇಗಂ ದೇಸಾಯಿ. ಕವಿತೆ-ಮನುಜಜನ್ಮ

ಹುಟ್ಟಿ ಬಂದಿಹೆ ನೀನು ಈ ಭುವಿಯಲಿ
ಅನುಭವಿಸಲೆಲ್ಲವನು ಈ ಬದುಕಲಿ..

ಸುಖದ ಜೊತೆಗೆ ಸ್ವಲ್ಪ ದುಃಖವಿರಲಿ
ಬೆಲ್ಲದ ಜೊತೆ ತುಸು ಬೇವು ಇರಲಿ..

ನೋವುನಲಿವುಗಳು ಕೂಡಿ ಬರಲಿ
ಮೊಗದಿಎಂದೆಂದೂ ನಗುತುಂಬಿರಲಿ..

ಹಗಲು ಬರುವುದು ಇರುಳಸರಿಸುತಲಿ
ದೀಪಬೆಳಗುವುದುತಿಮಿರದೂಡುತಲಿ..

ಸ್ನೇಹಪ್ರೀತಿಗಳು ಹೃದಯದೊಳಿರಲಿ
ಕೋಪ ಅಸೂಯೆಎಲ್ಲ ಭಸ್ಮವಾಗಲಿ..

ಒಲವಝರಿಯೊಂದುಜಿನುಗುತಿರಲಿ
ಮನದೊಳೆಂದೂ ಅದು ಚಿಮ್ಮುತಿರಲಿ..

ಭರವಸೆಯಕಿರಣಸೂಸುತಿರಲಿ
ಬಾಳಿಗದುಭದ್ರತೆ ನಿನಗೆನೆನಪಿರಲಿ..

ಸಾರ್ಥ್ಯಕ್ಯ ಇಹುದುಮನುಜ ಜನ್ಮದಲಿ
ಅರಿತುನಡೆಯಲುಹೂ-ಹಾಸಿಗೆ ಬಾಳಿನಲಿ..


2 thoughts on “ಹಮೀದಾ ಬೇಗಂ ದೇಸಾಯಿ. ಕವಿತೆ-ಮನುಜಜನ್ಮ

Leave a Reply

Back To Top