ಕಾವ್ಯ ಸಂಗಾತಿ
ಹೆಚ್.ಎಸ್.ಪ್ರತಿಮಾ ಹಾಸನ್
ಗಜಲ್
ಮಳೆರಾಯನು ಬಂದಿರಲು ಪ್ರೀತಿಯಲಿ ಕಾದಿಹೆನು ಗೆಳತಿ
ಸೆಳೆಯುತಲಿ ನನ್ನಯ ಮನವದುವೇ ಬಂದಿಹೆನು ಗೆಳತಿ
ಬೇಡವದುವೆ ಎಂದರು ಬಿಡದೆ ಕಾಡುತಿದೆ ಮನವೇ
ತಡೆಯುತಲಿ ಅಂತರಂಗವ ಭಾವನೆಯಲಿ ಬೆಂದಿಹೆನು ಗೆಳತಿ
ಸೆಳೆಯುತಲಿ ಮನದಲಿ ಆಸೆಯ ಭಾವವೂ ಹಲವು
ಗಳಿಗೆಗಳ ಎಣಿಸುತಲಿ ತಡೆಯದಲೇ ನೊಂದಿಹೆನು ಗೆಳತಿ
ಪಡೆಯುತಲಿ ಘನತೆಯ ಕಾಣದ ಒಲವಿಗಾಗಿ ಅಲೆಯುತಿರಲು
ನಡೆಯುತಲಿ ಬೇಕೆಂದು ದಾರಿಯಲಿ ನಿಂದಿಹೆನು ಗೆಳತಿ
ಮನದಲಿಯು ಬೇಡವೆಂದರೂ ಮೂಡುತಿದೆ ಭಾವನೆಯ ಪ್ರತಿಮೆಯು
ಕನವರಿಸಿ ಸಾಗುತ ನೆನಪಲಿ ಮಿಂದಿಹೆನು ಗೆಳತಿ
ಹೆಚ್.ಎಸ್.ಪ್ರತಿಮಾ ಹಾಸನ್