ಗಜಲ್ ಸಂಗಾತಿ
ಅರುಣಾನರೇಂದ್ರ
ಗಜಲ್
ನಗುನಗುತ ಒಲುಮೆಯ ದೀಪ ಹಚ್ಚಿದಿ
ಮನದಿ ನಿಂದು ಪ್ರೀತಿಯ ದೀಪ ಹಚ್ಚಿದಿ
ಜೊತೆಗೆ ನೀನಿರುವಾಗ ನಿತ್ಯ ದೀವಳಿಗೆ
ಎದೆ ಅಂಗಳದಿ ನಲ್ಮೆಯ ದೀಪ ಹಚ್ಚಿದಿ
ಕತ್ತಲೆ ಮೈಗೆ ಬೆಳಕ ತೊಡಿಸುವ ಜಾಣೆ
ಕರುಳ ತಟ್ಟಿ ಕರುಣೆಯ ದೀಪ ಹಚ್ಚಿದಿ
ಸಮರಸದ ಬದುಕಿನ ಸಂಗಾತಿ ನೀನು
ಸವಿ ಮಾತಿನ ಮಮತೆಯ ದೀಪ ಹಚ್ಚಿದಿ
ಅರುಣಾಳ ಕಣ್ಣಲ್ಲಿ ಹುಣ್ಣಿಮೆಯ ಬೆಳಕು
ಆರದಂತೆ ಜೀವ ಸೆಲೆಯ ದೀಪ ಹಚ್ಚಿದಿ
ಅರುಣಾ ನರೇಂದ್ರ