ಮನ್ಸೂರ್ ಮುಲ್ಕಿ ಅವರ ಕವಿತೆ-ಚಿಗುರಿದ ಬದುಕು

ನೆರಳನು ನೀಡಿದ ಮಾಮರವೇ
ಹಣ್ಣನು ನೀಡಿದು ತರವೇ
ನಿನ್ನನ್ನು ಕಡಿದ ಕಟುಕನಿಗೂ
ನೆರಳನೇ ನೀಡಿದು ಸರಿಯೇ

ಹೊಸ ಚಿಗುರು ಮೂಡುತಲಿ
ಹೊಸ ಬದುಕು ಕಾಣುವೆನು
ಬಳಿ ಬಂದರೆ ನೆರಳನೆ ನೀಡುವೆನು
ಬಯಸಿದರೆ ಹಣ್ಣನು ಕೊಡುವೆನು

ಪ್ರಕೃತಿಯ ಮೇಲಿನ ಸೌಂದರ್ಯ
ಕಾಣಿರಿ ನನ್ನನ್ನು ಬೆಳೆಸುತಲಿ
ಮತ್ತೆ ಎಂದೂ ಕಡಿಯದಿರಿ
ಪ್ರಕೃತಿಯ ಕೋಪಕೆ ಒಳಗಾಗದಿರಿ

ಸುಂದರ ಕಲ್ಪನೆ ನನ್ನದು
ಭಾವನೆ ಎಲ್ಲವೂ ನಿಮ್ಮದು
ಗಿಡವನು ಬೆಳೆಸಿ ಉಳಿಸಿರಿ
ಸುಖಮಯ ಜೀವನ ಕಾಣಿರಿ


Leave a Reply

Back To Top