ಹನಿಬಿಂದು ಅವರ ಕವಿತೆ-ಭಾವಗಳು

ಭಾವಗಳ ತೂಕವದು ಭಾವನೆಗೆ ನಿಲುಕದ್ದು
ಅಲ್ಲವೇ ನನ್ನೊಲವೆ ಕೇಳು ನೀನು?
ನಾವೆಯಲಿ ಪಯಣಿಗರು ನಾವೆಲ್ಲ ಇಲ್ಲಿ
ಸಲ್ಲದು ರೋಷ ದ್ವೇಷ ಮೋಸದಾಟ

ಕಾವ ಕಬ್ಬಿಣದ ತುದಿಯ ನಡಿಗೆ ಬೇಕಿಲ್ಲಿ
ಸಾವು ಬರುವರೆಗೆ ನಿತ್ಯ ಪಯಣ
ನೋವ ನುಂಗುತ್ತಾ ನಗಬೇಕು ಸತ್ಯ
ಬೇವು ಬೆಲ್ಲದ ಜೀವನದ ಸಾಂಗತ್ಯ

ತಾನು ತನ್ನದು ತನಗೆ ಎನುವ ಆಸೆಯು ಬೇಡ
ನಾವು ನಮ್ಮದು ನಮಗೆ ಎನ್ನುವುದು ಇರಲಿ
ಕಾವು ಕೊಡುತಲಿ ಬಿಸಿಯ ಹೆಚ್ಚಿಸಿ ಜೀವ
ಮೊಳೆಯುವ ತವಕ ಹೊಸ ಬಾಳಿಗಾಗಿ

ಭಾವನೆಯ ಭರವಸೆಯು ನಾಳಿನ ನಂಬಿಕೆಯು
ಭೋಗ ಭಾಗ್ಯದ ಆಸೆ ಒಳಗೊಳಗೆ
ಜಾವದಲಿ ಎದ್ದು ಆಟ ಪಾಠದಲಿ ಬಿದ್ದು
ನೋಟದೊಳಗಿನ ಮನದ ಯೋಚನೆಯ ಬೇರು..

—————————–

Leave a Reply

Back To Top