ವ್ಯಾಸಜೋಷಿಯವರ ಹೊಸ ತನಗಗಳು

ಒಡಲಲ್ಲಿ ರಕ್ಷಿಸಿ
ಮಡಿಲಲ್ಲಿ ಮುದ್ದಿಸಿ,
ಕಡಲಷ್ಟು ಪ್ರೀತಿಯ
ಕೊಡುವವಳು ಅಮ್ಮ.
**
ಹೆತ್ತು, ಹೊತ್ತು ಪೋಷಿಸಿ
ತುತ್ತನಿತ್ತು ರಕ್ಷಣ,
ತಾಯಿ ಮತ್ತು ಭೂಮಿಯ
ತೀರಲಾರದ ಋಣ.
*
ಕಾಣೋದಿಲ್ಲ ದೇವರು
ಮಾಡಿದರೂ ತಪವ,
ಸ್ಥಾವರ ಜಂಗಮಕೆ
ತಾಯಿ ಪ್ರತ್ಯಕ್ಷ ದೈವ.
**
ಗುಣ, ರೂಪ ಹಣಕೆ
ಸ್ವಾರ್ಥ ಪ್ರೀತಿ ಕಲ್ಮಶ,
ತಾಯಿ ನಿರ್ಮಲ ಪ್ರೀತಿ
ನಿಸ್ವಾರ್ಥದ ಆದರ್ಶ.

ಸಾಕಿ ಸಲಹುವಳು
ನಿರಪೇಕ್ಷಿತ ತಾಯಿ,
ಕಂದನ ಕಿರುನಗೆ
ಬಂಗಾರ ಅವಳಿಗೆ.
**
ಪಾದಸ್ಪರ್ಶ ಕ್ಷಮಿಸಿ
ಹೊಲಸನ್ನೂ ಹೇಸದೆ,
ಅನ್ನವಿತ್ತು ಪೊರೆವ
ಭೂಮಿಯಂತೆಯೇ ಅಮ್ಮ.

———————

Leave a Reply

Back To Top