ಕಾವ್ಯ ಸಂಗಾತಿ
ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ
‘ಪ್ರಕೃತಿಯ ಮಡಿಲಲಿ’
ಅರಿವಾಗದು ನಿನಗೆ ಎಂದಿಗೂ ಹೇ ಮನುಜ
ನಾನೇನು ಕನಸು ಕಂಡೆನೆಂದು
ನನ್ನೆಲ್ಲ ಉತ್ಸಾಹಕ್ಕೆ ತಣ್ಣೀರೆರೆಚಿ
ನೀ ಇಂದು ಸಂಭ್ರಮ ಪಟ್ಟೆಯೆಂದು
ನಿನ್ನ ಸ್ವಾರ್ಥದ ಬದುಕಿನಲ್ಲಿ
ನನ್ನ ಕಳಿಸಿದರೆನಂತೆ
ಛಲಬಿಡದೆ ಮತ್ತೇ ಹುಟ್ಟಿಸಿದೆ
ನನ್ನ ರಕುತದ ಪುಟ್ಟ ಜೀವವನು
ಹೆಮ್ಮೆ ಪಡಲೇ ನಾನೀಗ
ನೀ ಎಷ್ಟು ಚಿವಿಟಿದರು
ಮರಳಿ ಬೆಳೆದು ಬಿಟ್ಟೆನೆಂದು
ನಿನ್ನ ಸೋಲಲಿ ಗೆಲುವು ನನಗಾಯಿತೆಂದು
ಅಥವಾ,ಇದು ನನ್ನ ಭ್ರಮೆಯೇ? ನಭದಿಂದ ಒಮ್ಮೆಲೇ ಹುರುಪು ಕಳೆದು ಬಿದ್ದೇನೆ
ನಿ ಒಳ್ಳೆಯವನೆಂದು ಜಗ ಕಾಣಲು
ಹೂಕುಂಡದಂತೆ ಬಳಸಿದೆಯ ನನ್ನ
ಕಾಮುಕರಂತೆ ಬರುವ ಹುಳು ಕೀಟವನು ತಡೆದು
ನೀರುಣಿಸಿ ಬೆಳೆಸಿದೆಯಾ ನನ್ನ ಕಂದನನ್ನು
ನೋವಲ್ಲಿಯೂ ಸಂತಸವಿದೆ
ನನ್ನದೇ ಜೀವ ಮತ್ತೇ ಸೃಷ್ಟಿಯ ಮಡಿಲಿನಲ್ಲಿದೆಯೆಂದು
ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ.