ಐದನೇ ವಾರ್ಷಿಕೋತ್ಸವದ ವಿಶೇಷ

ಮಾತಿನಲ್ಲಿ ಸೆಳೆಯುವೆ ನಿನ್ನ
ನೆನಪಿನಲ್ಲಿ ನಾನಿರುವೆ ಸದಾ
ನೆನಪಾಗುವೆ ಮನದ ವಿಷಯ
ಹೇಳುವೆ ನಿನ್ನಲ್ಲಿ ನನ್ನ ಮನಸ್ಸಿದೆ
ನಿನ್ನ ನೋಟ ಮಾತಾಡುವ
ದಾಟಿ ಎಲ್ಲ ಇಷ್ಟ ಪ್ರೀತಿಸುವೆ ನಿನ್ನನೇ ಪ್ರೇಮಿಸುವೆ ನಿನ್ನನೇ
ಬೇರೆ ವಿಚಾರವೇ ಇಲ್ಲ
ಪ್ರೀತಿಯಲ್ಲಿ ಮುಳುಗುವಂತೆ
ಮಾಡಿದೆ ಕನಸಿನಲ್ಲಿ ತೇಲುವಂತೆ
ಮಾಡಿರುವೆ ನಿನ್ನ ನೋಡದೆ
ಮಾತನಾಡದೆ ಪ್ರೇಮಿಸುವಂತೆ
ಮಾಡಿರುವೆ ನೀ.. ಜಗತ್ತಿನಲ್ಲಿ
ಪ್ರೇಮವೆಂಬುದೆ ಪ್ರಮುಖ
ಎಂದು ಪ್ರತಿಪಾದಿಸಿದೆ ಒಲವು
ನೀನಾದೆ ಚೆಲುವು ನಾನಾದೆ
ಬೇರೆ ಯೋಚನೆಗಳೇ
ಬರುವುದಿಲ್ಲ ಹೃದಯ ತುಂಬಿದೆ
ಮಾತು ಬಾರದಾಗಿದೆ ಇಷ್ಟ
ಅಭಿಮಾನದಂತೆ ಸಿಕ್ಕಿರುವೆ
ಬಿಡುವ ಮಾತೇ ಇಲ್ಲ


ಬಾಳಲ್ಲಿ ಪ್ರೀತಿಯೆ
ಹೊಂಗಿರಣದಂತೆ ತುಂಬಿದೆ
ಕಂಡಲ್ಲೆಲ್ಲ ನೀನೇ ಕಾಣಿಸುವೆ
ಹರಿವ ನದಿಯಂತೆ ಬಾಳ
ಬೆಳಕಾಗುವೆ ಜೊತೆಯಲ್ಲಿ
ಜೊತೆಯಾಗಿ ಸಾಗೋಣ
ಹೆಜ್ಜೆ ಹೆಜ್ಜೆಗೂ
ಧ್ವನಿಯಾಗೋಣ ಮನಸ್ಸ
ವಿಚಾರವಿದು ನಿನ್ನ ಹೃದಯದ
ಮಾತು ತಿಳಿಸು ಗೆಳೆಯ
ಹೆಚ್ಚೇನೂ ಹೇಳಲಾರೆ..!!!!!!


Leave a Reply

Back To Top