ಐದನೇ ವಾರ್ಷಿಕೋತ್ಸವದ ವಿಶೇಷ

ನಡೆದಾಡುವ ವಿಶ್ವಕೋಶ,ಕಡಲ ತೀರದ ಭಾರ್ಗವ ಎಂದೇ ಖ್ಯಾತರಾದ ಶಿವರಾಮ ಕಾರಂತರದು ಬಹುಮುಖ ಪ್ರತಿಭೆ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸಾಹಿತ್ಯ, ವಿಜ್ಞಾನ, ಯಕ್ಷಗಾನ, ಚಿತ್ರಕಥೆ, ಎಲ್ಲದರಲ್ಲೂ ಎತ್ತಿದ ಕೈ.ಅವರ ಕಾದಂಬರಿಗಳಲ್ಲಿ ಪಶ್ಚಿಮ ಘಟ್ಟದ ಜನಜೀವನ ವರ್ಣನೆ ಚೆನ್ನಾಗಿ ಬರೆದಿದ್ದಾರೆ.
ಅವರ ಎಲ್ಲ ಕಾದಂಬರಿಗಳು ವಿಭಿನ್ನ ವಿನೂತನ ವಿಶಿಷ್ಟ ರೀತಿಯಲ್ಲಿ ಪಾತ್ರ ಗಳ ನಿರೂಪಣೆ ಶೈಲಿ ಗಟ್ಟಿತನದ್ದು.
ಅವರ ಚೋಮನ ದುಡಿ ಕಾದಂಬರಿ ಮೊಟ್ಟ ಮೊದಲ ಬಾರಿಗೆ ಅಸ್ಪ್ರಶ್ಯತೆ ಬಗ್ಗೆ ಬರೆದ ಹೆಗ್ಗಳಿಕೆ ಇವರದು.ಅಲ್ಲಿ ಕಂಡಂತಹ ಹೊಲೆಯರ ಬದುಕನ್ನು ಅನಾವರಣಗೊಳಿಸಿದರು.
ಚೋಮ ಬ್ರಾಹ್ಮಣರಾದ ದಣಿ ಸಂಕಪ್ಪರ ಬಳಿ ಜೀತ ಮಾಡಿಕೊಂಡಿರುತ್ತಾನೆ.ಅವನಿಗೆ ಐದು ಜನ ಮಕ್ಕಳು.ಹಿರಿಯ ಮಗ ಚನಿಯಾ ಮಲೇರಿಯಾ ಜ್ವರ ಬಂದು ಸಾವನ್ನಪ್ಪುತ್ತಾನೆ.ಕಿರಿಯ ಮಗು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುತ್ತಾನೆ.ಇನ್ನೂ ಮಗಳಾದ ಬೆಳ್ಳಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮನ್ವೆಲನ ಕಾಮದಾಸೆಗೆ ಬಲಿಯಾಗುತ್ತಾಳೆ.ಇನ್ನೇರಡು ಮಕ್ಕಳು ದುರ್ಮರಣ ಹೊಂದುತ್ತಾರೆ.ಚೋಮನಿಗೆ ಸೆರೆ ಕುಡಿಯುವ ಅಭ್ಯಾಸ,ಮದ್ಯ ಸೇವಿಸಿ ದುಡಿ ಬಾರಿಸುವುದು ಅವನ ಅಭ್ಯಾಸ.ತಾನು ಸ್ವಂತ ಭೂಮಿ ಹೊಂದಬೇಕು ಎಂಬ ಆಸೆ ಮೂಡುತ್ತದೆ.ಅದನ್ನು ಧಣಿಗೆ ಹೇಳಿದರೆ ಅಪಹಾಸ್ಯ ಮಾಡಿಯಾರು ಎಂದು ಮನದಲ್ಲೇ ಅಂದುಕೊಳ್ಳುತ್ತಾ ಸುಮ್ಮನಾಗುತ್ತಾನೆ.ಅವನ ಆಸೆ ಅರಿತ ಕ್ರೈಸ್ತ ಮಿಷನರಿಗಳು ಮತಾಂತರವಾದರೆ ಭೂಮಿ ನೀಡುವುದಾಗಿ ಆಮಿಷ ಒಡ್ಡುತ್ತಾರೆ.ಕೊನೆಗೆ ಚೋಮ ಆ ಆಮಿಷಕ್ಕೆ ಬಲಿಯಾಗದೆ ಕುಟುಂಬದಲ್ಲಾದ ನೋವುಗಳಿಂದ ಜರ್ಜರಿತನಾಗಿ ಮದ್ಯ ಸೇವಿಸಿ ಜೋರಾಗಿ ದುಡಿ ಬಾರಿಸುತ್ತಾ ಅಸುನೀಗುತ್ತಾನೆ.
ಶಿವರಾಮ ಕಾರಂತರ ಚೋಮನ ಪಾತ್ರದ ಮೂಲಕ ಅಸ್ಪೃಶ್ಯತೆ ಅವಮಾನ, ದುಃಖ, ಸ್ವಾಭಿಮಾನ ಬಿಟ್ಟು ಕೊಡದ ಚೋಮನ ಪಾತ್ರ ಇಂದಿಗೂ ಕಾಡುತ್ತದೆ.ಚೋಮ ಆ ಜನಾಂಗದ ಅನ್ಯಾಯ, ಶೋಷಣೆ ಪ್ರತಿನಿಧಿಸುವ ಪಾತ್ರ ಹಿರಿದಾದುದು.


One thought on “ಐದನೇ ವಾರ್ಷಿಕೋತ್ಸವದ ವಿಶೇಷ

Leave a Reply

Back To Top