ಪ್ರೇಮ ಪತ್ರ
ಲಲಿತಾ ಕ್ಯಾಸನ್ನವರ.
ಚಿಗುರು ಮೀಸೆಯ ಹುಡುಗನಿಗೆ
[2:31 pm, 20/10/2024] lalitakys@gmail,Com: ಮಗುವಿನ ಮನಸಿನ ತುಂಬು ಕನಸಿನ ಚಿಗುರುಮೀಸೆಯ ಒಗರು ಮುನಿಸಿನ ನಿದಿರೆ ಕದ್ದ ಚತುರ..ಪುಟ್ಟದಾಗಿ ಹೆಜ್ಜೆ ಇಟ್ಟು ಬಾರೋ ನನ್ನ ಹೃದಯಕೆ…ಓ ಪ್ರೇಮಚಂದ್ರಮ ನಿನ್ನ ನೋಡಿ ಮೋಡ ಚದುರಿತು ಹೂವು ಬಿರಿಯಿತು ಮುಖದ ಮೇಲೆ ಮಂದಹಾಸ, ತುಟಿಯ ಬಿರಿದರೆ ಮುತ್ತು ಮಳೆಯು ಸೋಕಿ ಮನವ ತಿಳಿಗೊಳಿಸಿತು ಹಚ್ಚ ಹಸಿರು ಪ್ರೀತಿ ಬೆಳೆಯು ನನ್ನ ಮನದ ಇಳೆಯಲಿ ಸೊಂಪಾಗಿ ಬೆಳೆಯಲು ಸ್ಪೂರ್ತಿಯಾಯಿತು. ಇನಿಯ
ಬಿಗಿದ ವೀಣೆಯ ತಂತಿ ನಾನು ಒಮ್ಮೆ ಬಂದು ನುಡಿಸು ನೀನು ನಿನ್ನ ಪ್ರೀತಿಗೆ ಜನ್ಮ ಜನ್ಮವೂ ಕಾಯಲೇನು ಕಾಯುವೇನು. ನಾನು ನಿನ್ನನ್ನು ಪ್ರೀತಿಸುವಷ್ಟು ನೀ ನನ್ನನ್ನು ಪ್ರೀತಿಸಲಾರೆ. ಕಾರಣವಿಲ್ಲದೆ ದ್ವೇಷಿಸಿದ ನಿನ್ನನ್ನು ಈಗಲೂ ಪ್ರೀತಿಸುವಷ್ಟು ವಿಶಾಲ ಹೃದಯಿ ನಾನು. ನೀನೇ ಹೇಳಿದಂತೆ ನಿನಗೆ ನನಗಿಂತಲೂ
ಚೆನ್ನಾಗಿರುವ ಹುಡುಗಿ ಸಿಗಬಹುದು. ಆದರೆ ನನ್ನ ಹ್ರದಯದ ಚಿತ್ಕಾರಕೆ ಬೆಲೆಯಿಲ್ಲವೇ..
ನೀ ನನ್ನನ್ನು ಕಳೆದುಕೊಂಡಿದ್ದಕ್ಕಾಗಿ
ನಿನಗೆ ನಾನು ಆಭಾರಿಯಾಗಲು ಸಾಧ್ಯವೇ ಇನಿಯಾ… ವಿಧಿ ಲಿಖಿತ ಎಂದು ಸುಮ್ಮನಾಗಲೇ. ಸಾಧ್ಯವಿಲ್ಲ..ಮನಸು ಛಿದ್ರವಾಗಿ ಭಾವನೆಗಳು ಸಾಯುವ ಮುನ್ನ ನೀನು ಬಂದು ಬಿಡು ಗೆಳೆಯಾ…
ಕೊನೆಯದಾಗಿ ಮಾತೊಂದಿದೆ…ಹೇಳದೆ ಉಳಿದ ಅನೇಕ ಮನದಾಳದ ಮಾತುಗಳು ನನ್ನನ್ನು ಪರಿತಪಿಸುವಂತೆ ಕಾಡಿವೆ. ಪ್ರೀತಿಗೆ ಮುನ್ನುಡಿ ಬರೆದ ನಿನ್ನ ನನ್ನ ಪ್ರೇಮ ಪಯಣಕೆ ಬೆನ್ನುಡಿಯು ನೀನೆ ಆಗೆಂದು ನಾ ನಿನ್ನ ಕನವರಿಕೆಯಲೂ ಕಾಯುವೆ ಇನಿಯಾ..ಬರುವೆಯಲ್ಲಾ…
ಅರೆ ನೋಡು ನನ್ನ ಮೊದಲ ಪ್ರೇಮ ಪತ್ರ ಕಳಿಸಿರುವೆ ಇದನ್ನಾದರೂ ಓದು ನನ್ನ ಪ್ರೀತಿ ನಿನಗೆ ನೆನಪಾಗಬಹುದು. ನನ್ನ ಪ್ರೀತಿಯ ಸುಗಂಧರಾಜ
ಸೂರ್ಯಕಾಂತಿಯ ಮೊಗದ ನಿಂಗೆ ಗುಲಾಬಿ ಸಂಪಿಗೆಯ ನೆನಪು ಸುಗಂಧ ತುಂಬಿದ ಕೇದಗೆಯ ಗುಚ್ಛದಾ ಕಮಲದಾ ಸುಂದರತೆಯರಿತ ಭಾವ ತುಂಬಿದ ಜಾಜಿಯ ಬಳ್ಳಿಯಷ್ಟು ಪ್ರೀತಿ ಹರಡಿದ ಮಕರಂದದಂತ ನೆನಹುಗಳು ನಿನ್ನ ನೆನಪು ಮಲ್ಲಿಗೆಯ ಸುಗಂಧದಂತೆ ನಾಗಪುಷ್ಪದಂತೆ ಮನದಿ ತುಂಬಿ ಹರಡಿದೆ. ಮರುಗದ ಬನದಲ್ಲಿ ಕಳ್ಳತನದಿ ಬಂದು ಚೆಂಡು ಹೂವಿನ ಚೆಂಡಿನಾಟ ನೀ ಇತ್ತೀಚೆಗೆ ಡೇರೆ ಬ್ರಹ್ಮ ಕಮಲ ನೆಲಸಂಪಿಗೆಯಂತೆ ಅಪರೂಪ ಆಗ್ತಿದಿಯ, ಲಿಲಿ ಜಾಸ್ಮಿನ್ ಗೋರಂಟಿ ಅರಿಶಿನದ ಮೋಡಿಗೆ ಮರುಳಾಗದೆ, ನೀರಿನಲ್ಲಿರು ಕಮಲದಂತೆ ಗುಲಾಬಿಯಲ್ಲಿರುವ ಮಕರಂದ ಜಾಜಿ ಮಲ್ಲಿಗೆಯ ಸುಗಂಧದಂತೆ ಒಂದಾಗಿರುವ ನಿನಗಾಗಿ ಕಾಕಡ ಮಲ್ಲಿಗೆ ಮುಡಿದು ದಾಸವಾಳ ಗೌರಿಸದಾಬಹಾರ್ ಹೂವಿನಂತೆ ಸೌದಿ ಅವುಗಳ ಜೊತೆಗೆ ಕಾಯುತ್ತಿರುವ ನಿನ್ನ ನಿತ್ಯ ಕಣಗಲು ರಾಣಿ ಗುಲಾಬಿ
ಲಲಿತಾ ಕ್ಯಾಸನ್ನವರ.
ಸುಪರ್ ಮೇಡಂ
Very nice madam