ಆತ್ಮಸಖ

ಕನಸಿನ ಕದ ಸರಿಸಿ
ಮನಸಿನ ಒಳ ಸರಿದವನೆ
ಹೆಸರ ತಿಳಿಯುವ ಮುನ್ನ
ಹೇಳ ಹೆಸರಿಲ್ಲದಂತಾದವನೆ
ಏನೆಂದು ಹೆಸರಿಸಲಿ ನಾ

ಕಣ್ಣ ರೆಪ್ಪೆಯಲಿ ಕಾಪಿಡುವ ಮುನ್ನ
ಕಣ್ಣಂಚಿನ ಕೊನೆಯ ಹನಿ ಯಾದವನೆ
ಕಾಣದ ಕೈಗಳಲ್ಲಿ ಕೋಲ್ಮಿಂಚು ಆದವನೆ
ಏನೆಂದು ಕರೆಯಲಿ ನಾ

ಉಚ್ವಾಸದಲಿ ಒಳಸರಿದು
ನಿಶ್ವಾಸದಲ್ಲಿ ನನ್ನ ತೊರೆದು
ಬಾಳೆಂಬ ನೌಕೆಯನು ನೋವೆಂಬ ನದಿಯಲಿ ಮುಳುಗಿಸಿದವನೆ
ಏನೆಂದು ತಿಳಿಯಲಿ ನಾ

ನಿನ್ನನೋವಿನಲೇರಿದ ಎದೆ ಬಡಿತ
ನಿಂದೇ ನಲಿವಿನಲಿಳಿಯದೇ
ತುತ್ತತುದಿ ಮೀರಿಸಿದವನೆ
ಏನೆಂದು ಅರಿಯಲಿ ನಾ
ನನ್ನಾತ್ಮ ಸಖನೇ?

ಅರಿಯದ ವಯಸ್ಸಿನಲ್ಲಿ ಮನದೊಳಗೆ ಮನೆಯ ಮಾಡಿದವ ,ಪದಪುಂಜಗಳ ಅಣೆಕಟ್ಟು ನಿರ್ಮಿಸಲಾರದ ಅಸಮರ್ಥತೆ, ಕಂಗಳಲ್ಲಿ ತೊಟ್ಟಿಕ್ಕುವ ಮುತ್ತಿನ ಮಣಿಗಳ ಹೊತ್ತು, ಅವನನರಸುತ್ತಿರುವ ಸಮಯದಲಿ ಕಣ್ಣಮರೆಸಿ ದೂರಸರಿದವನ, ನನ್ನ ಆತ್ಮಸಖನ ಕಥೆಯೇ ಈ ಕವನದ ವ್ಯಥೆ.

ಒಲವಿನೂರಿನ ಬೀದಿಯಲ್ಲಿ ನಾ ಹಾಕುತ್ತಿದ್ದೆ ರಂಗವಲ್ಲಿ, ಎದುರಿಗೆ ನಿಂತಿದ್ದ ಅವನಲ್ಲಿ, ನಸುನಗೆಯ ಚೆಲ್ಲಿ. ನೀಳವಾದ ಬಿಳಿಯ ಬೆರಳುಗಳಿಂದ ಮೂಡುತ್ತಿದ್ದ ರಂಗವಲ್ಲಿಯನ್ನು ಅಷ್ಟೇ ಆಳವಾಗಿ ವೀಕ್ಷಿಸುತ್ತಿದ್ದ ಅವನ ಕಣ್ಣಿನ ಪ್ರಕಾಶ ರಂಗೋಲಿಯ ಪ್ರಕಾಶಕ್ಕಿಂತಲೂ ಹೆಚ್ಚಾಗಿ ಪ್ರಜ್ವಲಿಸುತ್ತಿತ್ತು. ದಿನವೂ ರಂಗೋಲಿ ಹಾಕುವ ಸಮಯದಲ್ಲಿ

ಅರಿಯದ ವಯಸ್ಸಿನಲ್ಲಿ ಮನದೊಳಗೆ ಮನೆಯ ಮಾಡಿದವ ,ಪದಪುಂಜಗಳ ಅಣೆಕಟ್ಟು ನಿರ್ಮಿಸಲಾರದ ಅಸಮರ್ಥತೆ, ಕಂಗಳಲ್ಲಿ ತೊಟ್ಟಿಕ್ಕುವ ಮುತ್ತಿನ ಮಣಿಗಳ ಹೊತ್ತು, ಅವನನರಸುತ್ತಿರುವ ಸಮಯದಲಿ ಕಣ್ಣಮರೆಸಿ ದೂರಸರಿದವನ, ನನ್ನ ಆತ್ಮಸಖನ ಕಥೆಯೇ ಈ ಕವನದ ವ್ಯಥೆ.

ಒಲವಿನೂರಿನ ಬೀದಿಯಲ್ಲಿ ನಾ ಹಾಕುತ್ತಿದ್ದೆ ರಂಗವಲ್ಲಿ, ಎದುರಿಗೆ ನಿಂತಿದ್ದ ಅವನಲ್ಲಿ, ನಸುನಗೆಯ ಚೆಲ್ಲಿ. ನೀಳವಾದ ಬಿಳಿಯ ಬೆರಳುಗಳಿಂದ ಮೂಡುತ್ತಿದ್ದ ರಂಗವಲ್ಲಿಯನ್ನು ಅಷ್ಟೇ ಆಳವಾಗಿ ವೀಕ್ಷಿಸುತ್ತಿದ್ದ ಅವನ ಕಣ್ಣಿನ ಪ್ರಕಾಶ ರಂಗೋಲಿಯ ಪ್ರಕಾಶಕ್ಕಿಂತಲೂ ಹೆಚ್ಚಾಗಿ ಪ್ರಜ್ವಲಿಸುತ್ತಿತ್ತು. ದಿನವೂ ರಂಗೋಲಿ ಹಾಕುವ ಸಮಯದಲ್ಲಿ ಅಚಾನಕ್ಕಾಗಿ ನನ್ನ ಕಂಗಳು ಅವನ ಕೋಣೆಯ ಕಿಟಕಿಯತ್ತ ನೆಟ್ಟರೆ, ಅವನ ಕಣ್ಗಳು ನಾ ಹಾಕುತ್ತಿದ್ದ ರಂಗೋಲಿ ಜೊತೆ ಜೊತೆಗೆ ನನ್ನತ್ತ…
 ಸ್ನೇಹವೊ, ಪ್ರೇಮವೋ, ಮೋಹವೋ ಪರವಶತೆಯೋ ಏನೆಂದು ಅರಿಯದ ವಯಸ್ಸು ಜೊತೆಗೆ ಮಾಗದ ಮನಸ್ಸು, ಪರಸ್ಪರ ಕಣ್ಣೋಟಗಳ ವಿನಿಮಯದಲ್ಲಿ ಸಮಯ ಆರು ತಿಂಗಳು ಕಳೆದದ್ದು ತಿಳಿಯಲೇ ಇಲ್ಲ. ಮಾತನಾಡಿಸುವ ಮುನ್ನವೇ ಮನೆ, ಅಷ್ಟೇ ಏಕೆ ಊರನ್ನೇ ತೊರೆದು ಬೇರೆ ಊರಿಗೆ ತೆರಳಿದ ಅವನ ಭೇಟಿಯಾದದ್ದು ಅವನ ಮದುವೆಗೆ ಕಾರ್ಡ್ ಕೊಡಲು ಬಂದಾಗ…. ಮೌನದಲೆ ಮದುವೆಯ ಆಹ್ವಾನ ಪತ್ರಿಕೆಯನ್ನು ಸ್ವೀಕರಿಸಿದ ನನಗೆ ಮಾತನಾಡಲು ಏನು ಉಳಿದಿರಲಿಲ್ಲ.


ಅದಾದ ಐದು ವರ್ಷಗಳಲ್ಲಿ ನನ್ನ ವಿವಾಹವಾಗಿ ಪತಿರಾಯರ ಜೊತೆ ಮಂಗಳೂರಿಗೆ ತೆರಳಿದಾಗ ಅಚಾನಕ್ಕಾಗಿ ಪ್ರಕಾಶನ ಭೇಟಿಯಾಗಿದ್ದು, ನನ್ನ ಮನಸ್ಸಿಗೆ ಗರಿಯನ್ನು ಅಂಟಿಸಿದಂತಿತ್ತು. ಅತ್ಯಂತ ಆತ್ಮೀಯವಾಗಿ ಸತ್ಕರಿಸಿ, ನಮ್ಮನ್ನು ಬಿಳ್ಕೊಟ್ಟ ಅವನ ಮೊಗದಲ್ಲಿದ್ದ  ಮುಗುಳ್ನಗೆ ಶಾಶ್ವತವಾಗಿ ನನ್ನ ಮನದಲ್ಲಿ ಬಂಧಿಯಾಗಿತ್ತು. ಪರಸ್ಪರ ಫೋನ್ ನಂಬರ್ ಗಳ ವಿನಿಮಯವಾಗಿ ಎರಡು ವರ್ಷಗಳ ಕಾಲ ಕ್ಷೇಮ ಸಮಾಚಾರ ಸಕಲ ಕುಶಲೋಪರಿಗಳ ವಿಚಾರಣೆಗಳು ಹಿಂದಡಿಯಿಟ್ಟಿದ್ದು, ವೈಯಕ್ತಿಕ ಕೌಟುಂಬಿಕ ಸಮಸ್ಯೆಗಳು ಮುಂದಡಿ ಇಟ್ಟಾಗ. ಎರಡು ದಶಕಗಳ ನಂತರ ಅಚಾನಕ್ ಬ್ರಹ್ಮಾವರಕ್ಕೆ ಕಾಲಿಟ್ಟಾಗ ಎಲ್ಲಿಯಾದರೂ ಪ್ರಕಾಶನ ಮುಖ ದರುಶನವಾಗಬಹುದೆಂದು ರಸ್ತೆಯ  ಗಲ್ಲಿ ಗಳಲ್ಲಿ ಕಣ್ಣರಳಿಸಿದರೂ,ಪ್ರಯತ್ನ ಫಲಪದವಾಗಿರಲಿಲ್ಲ.
ಮನದಲ್ಲಿ ಆಗಾಗ ಮೂಡುತ್ತಿದ್ದ ಅವನ ಮುಖಾರವಿಂದವನ್ನು ಒಮ್ಮೆಯಾದರೂ ನೋಡಲೇಬೇಕು ಮಾತನಾಡಲೇ ಬೇಕೆಂದು ತೀವ್ರವಾಗಿ ಕಾಡತೊಡಗಿದಾಗ ಉಡುಪಿಯ ಸ್ನೇಹಿತರ ಸಹಾಯವನ್ನು ಪಡೆದು ಅವರ ಕಚೇರಿಯ ಸಂಪೂರ್ಣ ವಿಳಾಸವನ್ನು ನೀಡಿ ಎಲ್ಲಿರಬಹುದು ಎಂದು ವಿಚಾರಿಸಲು ತಿಳಿಸಿದಾಗ ನನಗೊಂದು ಆಘಾತ ಕಾದಿತ್ತು. ನನ್ನ ಪ್ರೀತಿಯ ಪ್ರಕಾಶ ಆಕಾಶದ ನಕ್ಷತ್ರವಾಗಿ ಪ್ರಕಾಶಿಸಿ, ಎಂಟು ವರ್ಷಗಳು ಸಂದಿದ್ದವು. ಒಮ್ಮೆಯಾದರೂ ಮುಖವನ್ನು ನೋಡದೆ ಮಾತನ್ನು ಆಡದೆ 25 ವರ್ಷಗಳು ಅದು ಹೇಗೆ ಕಳೆದು ಹೋಯಿತೆಂದು ನೆನೆದಾಗ ನಿಟ್ಟುಸಿರ ಹೊರತು ನನಗೇನೂ ನನದೇನೂ ಉಳಿದಿರಲಿಲ್ಲ ನೋವಿನ ವಿನಹ.


2 thoughts on “

Leave a Reply

Back To Top