ಕಾವ್ಯ ಸಂಗಾತಿ
ಸುಧಾ ಹಡಿನಬಾಳ ಅವರ ಕವಿತೆ
‘ಕಾಮನಬಿಲ್ಲು’
ಹೀಗೊಂದು ಕುತೂಹಲ ಸುಮ್ನೆ
ಕಾವ್ಯವೇ ಇಲ್ಲದಿದ್ದರೆ ಒಂದೊಮ್ಮೆ ??
ಬರೀ ಒಣ ಮರುಭೂಮಿಯಂತೆ
ಜೀವತಂತಿ ಮುರಿದ ದೇಹದಂತೆ
ಪರಿಮಳವಿಲ್ಲದ ಪುಷ್ಪದಂತೆ
ಸ್ವಾದವಿಲ್ಲದ ಅಡುಗೆಯಂತೆ
ಕೀಲಿ ಕೊಟ್ಟ ಗೊಂಬೆಯಂತೆ
ಜೀವಕಳೆ ಇಲ್ಲದ ಪ್ರೇತದಂತೆ
ಕಾವ್ಯ ಹುಟ್ಟುವುದೆಂದರೆ ಭಾವ ಸ್ಫುರಿಕೆ
ಪದಗಳ ಹೂ ಮಾಲೆ ಹೆಣೆಯುವಿಕೆ
ಮನಸು ಮಾಗಿದಷ್ಟು ಕಾವ್ಯ
ಜೀವಂತಿಕೆ ಭಾವ ಶ್ರೀಮಂತಿಕೆ
ಕಾವ್ಯ ಸಕಲರನು ಸೆಳೆವ ಸೂಜಿಗಲ್ಲು
ಭಾವ ಲೋಕದ ಕಾಮನಬಿಲ್ಲು
ಕಾವ್ಯ ಹೃದಯ ಹೃದಯಗಳ
ಬೆಸೆವ ಭಾವ ಬೆಸುಗೆ
ಲೋಕ ಹಿತಕೆ ಸ್ಪಂದಿಸುವ ಲೇಖನಿಯಲೆ
ಖಡ್ಗ ಜಳಪಿಸುವ ಬರವಣಿಗೆ
ಪ್ರೇಮಿಗಳ ಬಾಳಿನ ಮೊದಲ ತೊದಲ್ನುಡಿ
ಲೇಖಕರ ಬರೆಹಕೆ ಹಿಡಿವ ಕನ್ನಡಿ
ಗದ್ಯ ಎಲ್ಲರಿಗೂ ಒಲಿವ ನಡಿಗೆಯಾದರೆ
ಕಾವ್ಯ ಕೆಲವರನೆ ಆಯ್ದುಕೊಳುವ ನರ್ತನ
ಹೀಗೊಂದು ಕುತೂಹಲ ಸುಮ್ನೆ
ಕಾವ್ಯವೇ ಇಲ್ಲದಿದ್ದರೆ ಒಂದೊಮ್ಮೆ ??
ಸುಧಾ ಹಡಿನಬಾಳ
ಅರ್ಥ ಮತ್ತು ಭಾವಪೂರ್ಣ
ಧನ್ಯವಾದಗಳು
ಕಾವ್ಯದ ಹಣ್ಣು ಬಿರಿಯದಿದ್ದರೆ !!!!
ಗಮ ರುಚಿ ಎರಡೂ ದುರ್ಗಮ !!!!!
ಸತ್ಯ ಸಂದೇಶ .
ರಾಮಮೂರ್ತಿ ನಾಯಕ,
ನಿಜ ಸರ್… ತಮ್ಮ ಅಭಿಪ್ರಾಯಕ್ಕೆ ಸಹಮತ..
Super mam
Savita
Thanks Savita
Nice