‘ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ’ದೇಶದ ಸ್ವಚ್ಛತೆ ಕಡೆ ಇರಲಿ ಗಮನ’

ದೇಶದ ಸ್ವಚ್ಛತೆ ಕಡೆಗೆ ಇರಲಿ
ಭಾರತ ಪ್ರಜೆಗಳ ಗಮನ|೧|
ನಾಡು ನುಡಿಯ ಸ್ವಚ್ಛತೆಯಿಂದ
ಮನಸದು ಕುಣಿಯಲಿ ತನನ|೨|

ಉದಯ ಕಾಲದ ಕಿರಣದಂತೆ
ಮಿಂಚಲಿ ರಾಷ್ಟ್ರದ ಆನನ|೩|
ಸುಂದರಿ ತೊಟ್ಟ ಕಿರೀಟದಂತೆ
ಹೊಳೆಯಲೆಲ್ಲಾ ರಾಜ್ಯದ ಕಾನನ|೪|

ರಾಜಕೀಯಕೆ ಕಾಣದು ಕಲ್ಮಷ
ತಾನಾಗಿಹೆ ತಥ್ಯ ಕಸದ ವನ|೫|
ಅಧಿಕಾರ ಸಿಕ್ಕರೆ ಸಾಕು ಸಿಕ್ಕವ
ಅಗೆಯುವ ರಸ್ತೆ ನದಿ ಗಿರಿ ವನ|೬|

ಭ್ರಷ್ಟಾಚಾರದ ಕೊಳೆಯ ತೊಳೆಯುತ
ತಪ್ಪಿಸಿ ಆಗುವ ಬಿರು ಅವಮಾನ|೭|
ಸ್ವಚ್ಛವಾಗಲಿ ಮೇಲಿಂತಳ ಎಲ್ಲೆಡೆ
ಕೆಟ್ಟು ಕಲುಷಿತರಾದಂತವರ ಮನ|೮|

ಜನರೂ ಅರಿಯದಂತೆ ಇರುವಿರೇಕೆ
ಪ್ರಕೃತಿಗೆ ಇರುವ ಮಿತಿಯ ಸಹನ|೯|
ತಿಳಿಯಿರಿ ಮೊದಲು ಮೋರಿ ಕಶ್ಮಲ
ಮುಂದಿನ ಪೀಳಿಗೆ ಕೊಲ್ಲುವ ಧೂರ್ತ ಹೀನ|೧೦|

ಈ ಎಲ್ಲ ಪ್ರಧೂಷಣೆಯಾದರೆ ಪತನ
ಆಗುವುದಲ್ಲ ಸರ್ವರ ಪರಿಶುದ್ಧ ಜತನ|೧೧|
ಕುಶಿಯಿಂದದಕೆ ತಲೆದೂಗುವ ಅಭ್ಯಾಗತ
ಮಾಡುವನಲ್ಲ ನಮ್ಮಯ ದೇಶಕೆ ನಮನ|೧೨|


Leave a Reply

Back To Top