ಕಾವ್ಯ ಸಂಗಾತಿ
‘ಮಂಜುಮುಸುಕಿದ ದಾರಿ’
ಲಲಿತಾ ಕ್ಯಾಸನ್ನವರ
ಒಬ್ಬರಿಗೊಬ್ಬರು ಆಸರೆಯಿರೆ
ಕಾಲಚಕ್ರ ನಿರಂತರ ಚಲಿಸುತಿದೆ
ಒತ್ತಾಯದ ಬದುಕಿಗೆ ಹೊಸ ಅರ್ಥ
ಹುಡುಕುತ ತಡವರಿಸುತ ಏಳುತಬೀಳುತ
ಕುಲಾಯಿ ಯಾವುದಾದರೇನು?
ಮಂಜು ಬಿಸಿಲು ತಡೆಯುವದೇನು?
ಬಿಸಿಲ್ಗುದುರೆಯ ತೆರದಿ ಓಡುತಿರಲು
ಕುಗ್ಗಿ ಹಿಗ್ಗದಿರು ಸಮನ್ವಯತೆಯಲಿ ಬಾಳು
ರಸ್ತೆಯು ತುಂಬಾ ಸಪೂರ ಎನ್ನದಿರು
ಇರಲಿ ಎಚ್ಚರ ಮುಂದೆದಾರಿ ಇದೆ
ಮಧ್ಯೆ ಅಡೆ ತಡೆ ಇದ್ದೇ ಇದೆ ಸುಡು ಅದನ್ನು
ಇಡು ಹೆಜ್ಜೆ ಗುರುತು ಉಳಿಯುವಂತೆ ಮುಂದೆ
ಆಲದ ಬಿಳಲ ತೆರದಿ ನಿಷ್ಟುರ
ಇರಲಿ ಅನಂತ ಗುರಿ ಆದರೆಡೆ ಗಮನ
ಮುಟ್ಟು ‘ನೀ ಹೊಸ ಮನ್ವಂತರ ನಿಲ್ಲಿಸದಿರು ಚಕ್ರವ ಜೊತೆಗಿರುವೆ ನಾ ಅನವರತ ನಿನ್ನ ನೆರಳತರ
ಲಲಿತಾ ಕ್ಯಾಸನ್ನವರ
ಅಭಿನಂದನೆಗಳು.. ಕವಿತೆ ತುಂಬ ಚನ್ನಾಗಿದೆ.keep it up ma’am