ಕಾವ್ಯ ಸಂಗಾತಿ
ಹನಮಂತ ಸೋಮನಕಟ್ಟಿ
ಶಾಯರಿ
ನಿನ್ನ ಮಾರಿ ಬೆಳಕಿನ್ಯಾಗ
ನೂರ ದಾರಿ ಕಾಣತಾವಂತ ಗೊತ್ತ ಆಗೈತಿ
ಆದ್ರ ನಿನ್ನ ಮಾರಿ ಬೆಳಕಿನ್ಯಾಗ ನಾ ಹೋದಾಗ
ನಮ್ಮನಿ ದಾರಿನ ನಂಗ ಮರತ ಹೋಗೈತಿ
ನೀ ನನ್ನ ನೆನಿಸಿದಾಗೊಮ್ಮೆ
ಅಷ್ಟ ನನಗ ಬಿಕ್ಕಳಿಕೆ ಬರತ್ತಂತ ಅನಕೊಂತಿಧ್ಯಾ
ಆದರ ನನ್ನ ಬಿಕ್ಕಳಿಕಿಗೂ ನಿನ್ನ ನೆನಪಾಗಿ
ಹೊಳ್ಳಿ ಹೊಳ್ಳಿ ಬರತ್ತನ್ನುದು ಈಗೀಗ ಗೊರತಮಾಡಿಕೊಂಡಿಧ್ಯಾ
ನೀ ಆಡುವ ಒಂದೊಂದು ಮಾತಿಗೆ ಎಷ್ಟೆಷ್ಟು ಕಣಕಟ್ಟ್ ವಿದ್ದೆ ಕಲಿಸೀದಿ
ಕಣಕಟ್ ವಿದ್ದೆ ಕಲತ ಮಾತ
ನನ್ನತ್ರ ಕಳಿಸಿ
ನನ್ನ ಜೀವನದಾಗಿನ ಪೂರ್ತಿ ನಿದ್ದೀನ
ಕದಿಯಾಕ ಹೇಳಿದಿ
ನಿನ್ನ ಇಷ್ಟ ದಿನದ ಮೌನದ ಮಾತಿನ್ಯಾಗ
ಎಷ್ಟ ನಮೋನಿ ಅಗಸಿದ್ದೆ ಇಟ್ಟೀದಿ
ಇವತ್ತ ನಿನ್ನ ಒಂದೊಂದ ಮಾತಿನ ಅಗಸಿದ್ದೆಯಿಂದ
ಆಯುಷ್ಯ ಮುಗದ ಒಂದೊಂದು ಅಂಗಾನು ಹೊಸಾದು ಮಾಡಡಿ ಕೊಟ್ಟಿದಿ
ಇಷ್ಟ ದಿನ ನಿನ್ನ ಮಾತು ಕೇಳಲಾರದ ನನ್ನ ಮನಸಿಗೆ ಬದುಕ ಬ್ಯಾಡ ಅನಸಿ ಹೋಗಿತ್ತು
ಅದರ ಇವತ್ತು ನೀ ಹೇಳಿದ ಒಂದೊಂದ ಮಾತ ಕೇಳಿ
ನನಗಂತೂ ಎಷ್ಟ ಜನ್ಮ ಇದ್ರೂ ನಿನ್ನ ಮಾತ ಕೇಳಿಕೊಂತ ಇರಬೇಕ ಅನ್ಸೈತಿ
ಹನಮಂತ ಸೋಮನಕಟ್ಟಿ
ಸೂಪರ
Superb sir