ಮನ್ಸೂರ್ ಮೂಲ್ಕಿ ಅವರ ಕವಿತೆ-ಕಾಣದ ಹೃದಯ

ಯಾರೂ ಕಾಣದ ಹೃದಯವು ಮಾತಾಡಿದೆ
ಪ್ರಣಯ ಗೀತೆಯನು ಹಾಡಿದೆ
ಮಾತೆಲ್ಲವೂ ನಿಲ್ಲದೆ ನಿರಂತರವಾಗಿದೆ
ಪ್ರೀತಿಯು ಮುಂಜಾನೆಯ ಮಂಜಾಗಿದೆ

ಉಸಿರೇ ನಿನ್ನೆದುರಿಗೆ ನಾ ನಿಲ್ಲುತ
ತಂಗಾಳಿಯಂತೆ ಜೊತೆಯಾಗುವೆ
ನಿನ್ನ ಹೆಜ್ಜೆಗೆ ಗೆಜ್ಜೆಯಾಗುತ
ಸುಮಧುರ ಸಂಗೀತ ನಾನಾಗುವೆ

ಅರಿವಿಗೆ ಬಂದ ನಿನ್ನ ಸನ್ನೆ
ನನ್ನನ್ನು ಕಾಡುತಿದೆ
ಬಾನಂಗಳದಿ ಚಂದಿರನ ಬೆಳಕಿನಲಿ
ಕೋಮಲತೆಯ ನಗುವು ಕಾಣುತ್ತಿದೆ.

ಮುಸ್ಸಂಜೆಯ ನಡುಗೆಯು
ಮಾತಿಗೆ ಗಳಿಗೆಯದು
ಬದುಕಿನ ಬಾಳಿನಲ್ಲಿ ನಾನು ನೀನು
ನಡೆಯುವ ತೀರದಲ್ಲಿ


Leave a Reply

Back To Top