ಕಾವ್ಯ ಸಂಗಾತಿ
ನಿನ್ನಡೆಗೆ ಬರಲಣಿ
ಪ್ರೀತಿಯೇ ಪ್ರತಿಕ್ಷಣ ಕ್ಷಣವೂ ನಿನ್ನದೇ ನೆನಪಿನಲ್ಲಿ ಕೊರಗಲಾರಂಭಿಸಿದ್ದೇನೆ
ಪ್ರತಿ ನಿಮಿಷವು ನಿನ್ನ ನೆನಪುಗಳೊಂದಿಗೆ ನನ್ನ ಮಾತುಕತೆ
ನಿನ್ನ ನೆನಪಿನೊಂದಿಗೆ
ಸಲಿಗೆ ಸರಸ
ನಿನ್ನ ನೆನಪಿನ ಒನಪಿನೊಂದಿಗೆ ಸಂಭ್ರಮ ಸಂತೃಪ್ತಿ ಸಡಗರ
ಅದೇನೋ ಕಂಡು ಕಾಣದ
ಭವಿಷ್ಯದ ಕನಸು
ಪುಟ್ಟ ಹೆಜ್ಜೆ ಇಡಲಾರಂಭಿಸಿದೆ ಮತ್ತೆ ನಿನ್ನಡೆಗೆ ಈ ಮನಸು
ಭದ್ರ ಭಾವನೀಡಿ ಕೈ ತೆರೆದು ಸ್ವಾಗತಿಸು
ಮುಗುಳ್ನಕ್ಕ ಬರಮಾಡಿಕೋ
ನನ್ನ ಕನಸುಗಳಿಗೆಲ್ಲ ಚಿತ್ತಾರದ ರಂಗೋಲಿ ಇಟ್ಟು ಸಂಭ್ರಮಿಸು
ಇಗೋ ನಾನೀಗ ನಿನ್ನೆಡೆಗೆ ಬರಲಣಿ
ಕೈಯಲ್ಲಿ ಕೈಯಿಟ್ಟು ಮುನ್ನಡೆಯುವ ಕೊನೆವರೆಗೂ ಬಾಳ ದಾರಿಯ ಕ್ರಮಿಸುವ ಬದುಕ ನಗುತ ರಮಿಸುವ…..
ಡಾ ವಿಜಯಲಕ್ಷ್ಮಿ ತಿರ್ಲಾಪೂರ
Very beautiful poem mam
Very nice madam