ರತ್ನರಾಯಮಲ್ಲ ಅವರ ಹೊಸ ಗಜಲ್

ಮರಳಿ ನಿನ್ನ ಗೂಡು ಸೇರುವ ಆಸೆ ಗಜಲ್ ರಾಣಿ
ನಿನ್ನಲಿ ಶಾಂತಿಯನು ಕಾಣುವ ಆಸೆ ಗಜಲ್ ರಾಣಿ

ಕಾಲದ ಕಾಲುಗಳಿಗೆ ಬೇಡಿ ತೊಡಿಸೋಣ ಮನದರಸಿ
ನಿನ್ನ ಜೊತೆಯಲಿ ಹೆಜ್ಜೆ ಹಾಕುವ ಆಸೆ ಗಜಲ್ ರಾಣಿ

ಹೃದಯದಲಿ ನಿನ್ನದೇ ಕಲರವ ಬೇಗಂ ಸಾಹೇಬಾ
ನಿನಗಾಗಿ ಪ್ರೇಮಗೀತೆ ಹಾಡುವ ಆಸೆ ಗಜಲ್ ರಾಣಿ

ಮನಸ್ಸಿಗೆ ಮುದ ನೀಡುವ ಚಿರಮಧುಬಾಲೆ ನೀನು
ಅಮಲಿರುವ ಭಾವವನು ಗೀಚುವ ಆಸೆ ಗಜಲ್ ರಾಣಿ

ನನ್ನುಸಿರಲಿ ನಿನ್ನ ಹೆಸರು ಬೆರತಿದೆ ಏಳೇಳು ಜನುಮಕೂ
ಸದಾ ಮಲ್ಲಿಗೆ ಸುಮರಾಗ ಕೇಳುವ ಆಸೆ ಗಜಲ್ ರಾಣಿ

Leave a Reply

Back To Top