ರಾಜೇಶ್ವರಿ ಎಸ್ ಹೆಗಡೆ ಅವರಕವಿತೆ-ನಂದಾದೀಪ.

ಅಂಧಕಾರವನ್ನು ದೂರೀಕರಿಸು ದೀಪ
ಅಂತರಂಗವ ಶುದ್ಧದಿ ಬೆಳಗಿಸು ದೀಪ
ಧಾರ್ಮಿಕ ಕಾರ್ಯಕೆ ಬೆಳಗುವ ದೀಪ
ನಂದದೇ ಸದಾ ಉರಿವ ನಂದಾದೀಪ.

ತುಪ್ಪದಿ ಬೆಳಗಲು ಅತ್ಯುತ್ತಮ ಫಲ
ಎಳ್ಳೆಣ್ಣೆ ದೀಪ ಹಚ್ಚಲು ಉತ್ತಮ ಫಲ
ತೆಂಗಿನೆಣ್ಣೆಲಿ ಬೆಳಗಲು ಮಧ್ಯಮ ಫಲ
ನವರಾತ್ರಿ ಶಾಸ್ತ್ರಕೆ ಬೆಳಗು ನಂದಾದೀಪ.

ನಿರಂತರ ನಗುತ ಬೆಳಗು ತೈಲ ದೀಪ
ಆನಂದ ವೃದ್ಧಿಸುವ ಸಾಕ್ಷಿಕ ದೀಪ
ಹಬ್ಬ ಹರಿದಿನಕೆ ಸಾಕ್ಷಾತ್ ದೇವಸ್ವರೂಪ
ವಿಘ್ನ ಬಾರದಂತೆ ಬೆಳಗು ನಂದಾದೀಪ.

ಸಾಲು ಸಾಲು ದೀಪ ಹಚ್ಚಲು ದೀಪಾವಳಿ
ಅನಂತ ಬೆಳಗು ದೀಪಕೆ ಹಬ್ಬದ ಪ್ರಭಾವಳಿ
ಮನವೆಲ್ಲ ಶುದ್ಧಿಸಿ ದೀಪವನು ಬೆಳಗಿಸಿ
ಮನೆ ಮಕ್ಕಳನೆಲ್ಲ ಆನಂದದಿಡಲು ವಿನಂತಿಸಿ


Leave a Reply

Back To Top