ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಅಪ್ಪನ ನೆನಪುಗಳು
ಜೊತೆಗಿದ್ದ ಜೀವತಂತು ಸ್ವರವೊಂದು
ದೇವರ ಬಳಿ ಸಾಗಿದೆ
ಹೃದಯದ ಬಡಿತವು
ನಿಂತಹಾಗೆ ಆಗಿದೆ
ಮನದ ತುಂಬ ನೋವು
ಸಂಕಟ ಯಾತನಗಳೇ ಆವರಿಸಿದೆ
ಮೌನದಲಿ ಬದುಕಿನ
ಪಯಣ ಮುಂದುವರೆದಿದೆ
ಹೃದಯದ ವೇದನೆಯನ್ನು
ಯಾರಿಗೂ ಹೇಳದಾಗಿದೆ
ಕಿತ್ತುತಿನ್ನುವ ನೋವು
ಮನದಿ ನೆಲೆಯಾಗಿದೆ
ಕಣ್ಣಿನೊಳಗಡೆ ಇರುವ
ನಿಮ್ಮ ಭಾವಚಿತ್ರ
ಚುರೇ ಚೂರು ಕದಲದಾಗಿದೆ
ನಿಮ್ಮ ವ್ಯಕ್ತಿತ್ವವೇ ನಮಗೆ
ದಾರಿ ದೀಪವಾಗಿದೆ
ನೀವು ಬದುಕಿದ ರೀತಿ ನೀತಿಯೇ ಆದರ್ಶನೀಯವಾಗಿದೆ
ನಿಮ್ಮ ಜೊತೆಗೆ ಕಳೆದ ಕ್ಷಣಗಳೇ
ದೇವರ ದರ್ಶನವನ್ನು ಮಾಡಿಸಿದೆ
ದೇವರಂತ ದೇವರಿಗಿಂತಲೂ ನೀವೇ
ನಮಗೆ ದೇವರಾಗಿರುವಿರಿ ಅಪ್ಪ
ನಾಗರಾಜ ಜಿ. ಎನ್. ಬಾಡ
Appa ondu teppa
Nammannu hottu
Dada serisuva deva
Pramod joshi