ರಾಬರ್ಟ್ ಬರ್ನ್ಸ್ ಅವರ ಇಂಗ್ಲೀಷ್ ಕವಿತೆ ‘ಕಣ್ಣಲ್ಲೆ ನನ್ನ ಮನಸೆಳೆಯುವವಳು’ಕನ್ನಡಾನುವಾದ ವಂದಗದ್ದೆ ಗಣೇಶ್

ಕಣ್ಣಲ್ಲೆ ಹೀಗೆ ನನ್ನ ಸೆಳೆಯುವ ಬದಲು
ಬಳಿ ಬಂದು ನನ್ನ ಅಪ್ಪಿಕೊಳಬಾರದೇ?

ನನ್ನ ಪ್ರೇಮವನು ನೀ ಗಳಿಸಬೇಕೆಂದರೆ
ಅರಿತುಕೊಳಬಾರದೆ ನನ್ನ ಬಳಿ ಬಂದು

ನೀ ಬಂದು ನನ್ನ ಪ್ರೀತಿಯ ಬೇಡಿದರೆ
ಒಲ್ಲೆ ಎಂದೆನಲು ನನಗೆ ಸಾಧ್ಯವೇ?

ದಿಟವಾಗಿ ನನ್ನ ನೀ ಗೆಲುವುದಾದರೆ
ಬಳಿ ಬಂದು ನಿಜ ಪ್ರೀತಿಯನು ತೋರು.

ನನ್ನ ಬಳಿ ಬಂದು ಮುತ್ತಿಡುವುದಾದರೆ
ಅದ ತಡೆಯುವುದಕೆ ನಾನೇನು ಮರುಳೇ?

ಸಂಗಾತಿಯಾಗಲು ಬಯಸುವುದಾದರೆ
ಈಗಲೇ ಬಂದೆನ್ನ ಬರಸೆಳೆದು ಅಪ್ಪಿಕೋ.


Leave a Reply