ಕಾವ್ಯ ಸಂಗಾತಿ
ಅಹಂ ಬ್ರಹ್ಮಾಸ್ಮಿ….
ಪಿ.ವೆಂಕಟಾಚಲಯ್ಯ
[5: ಹೊತ್ತು ಮಾರುದ್ದ ಬಂದ ಮೇಲೆ ಎದ್ದು,
ಹೊದ್ದ ಹೊದಿಕೆಯನು ಜಾಡಿಸಿ ಒದ್ದು,
ಬಗ್ಗಿ ನೋಡುವಳು ಪಕ್ಕದ ಕೋಣೆ ಯಲಿ.
ನನ್ನ ಸಹಭಾಗಿನಿ, ಕಣ್ಣು ಜ್ಜುತಲಿ.
ಅಲ್ಲಿ, ಗಜಮುಖ ಷಣ್ಮುಖ, ಅವರಮ್ಮ ಅಪ್ಪ,
ಬೆಣ್ಣೆ ಮೆಲ್ಲುತ, ಅಂಬೆಗಾಲಲಿ ಕೃಷ್ಣಪ್ಪ,
ವಿರಾಟ ಪುರುಷನದೊ ತಿರುಪತಿ ತಿಮ್ಮಪ್ಪ,
ನೆಲೆಗೊಂಡಿಹರಲ್ಲಿ, ಆ ಸಣ್ಣ ಕೋ ಣೆಯಲಿ.
ಮಂದಸ್ಮಿತೆ, ವೀಣಾಪಾಣಿ, ವಾ ಗ್ದೇವಿ,
ಸನಿಹವೆ, ಸಿರಿಪ್ರಧಾಯಿನಿ, ಶ್ರೀ ದೇವಿ,
ನಾನಾ ರೂಪದ ಶಕ್ತಿದೇವತೆಗಳುಟ,
ಬಿಜಯಂಗೈದಿಹರಲ್ಲಿ, ಆ ಸಣ್ಣ ಕೋ ಣೆಯಲಿ.
ಬುದ್ಧಿಯು ತೊರ್ಪ ವಿಚಾರ ಮಂಥ ನದಲಿ,
ಆಚಾರ, ಶಾಸ್ತ್ರ, ಸಂಪ್ರದಾಯಗಳು ದ್ಭವಿಸೆ.
ಸ್ಥಾವರ- ಜಂಗಮ ನಿಜ ಪರಿಕಲ್ಪನೆ ಯಲಿ,
ಸ್ಥಾವರ ಮೂರ್ತವೆ ಮೇಲ್ಗೈಯ್ ಸಾಧಿಸೆ.
ಕರ್ತನು ಸೃಷ್ಟಿಪನೆನಪ ಈ ಬ್ರಹ್ಮಾಂ ಡದಲಿ,
ಏಕತೆಯೆಲ್ಲಿದೆ, ಪೃಥ್ವಿಯ ಜನಗಳ ಲಿ,
ಅವರವರ ಹಿತಕೆ ಅವರವರ ಮತ ವು,
ಏಕದೇವೋಪಾಸನೆ, ಯಾರಿಗೆ ಹಿತ ವು?
ಹಲವು ದೇವರುಗಳ ನಂಬಿಕೆ ಏನೇ ಇರಲಿ,
ಬಾಹ್ಯಾಡಂಬರ ಆರಾಧನೆ ಹೇಗೋ ಇರಲಿ,
ತನ್ನೋಳಗಿನಂತ:ಶಕ್ತಿಯ ಅರಿವು ಮೂಡಲಿ.
ಇದುವೇ ಸನಾತನಿಯರ “ಅಹಂ ಬ್ರಹ್ಮಾಸ್ಮಿ”.
ಪಿ.ವೆಂಕಟಾಚಲಯ್ಯ.