ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ಮರೆಯಲಾಗದ ನೆನಪುಗಳು

ಮರೆಯಲಾಗದ ನೆನಪುಗಳು
ಓ ಗೆಳತಿ ನೀ ನನಗೆ ನೀಡಿರುವ
ಆ ಪ್ರೇಮದ ಪರಿಯ ಸಿಹಿಯಾದ
ಸಾವಿರಾರು ಸಂದೇಶಗಳ ನಿಘಂಟು..!!

ನಾ ಬರೆಯುವಾಗ ನೀನು ಅಕ್ಷರಗಳಾಗಿ
ನಾ ಓದುವಾಗ ನೀನು ಸಂದೇಶವಾಗಿ
ನನ್ನ ಮನದೊಳಗಿನ ಆಸೆ ಕನಸುಗಳಿಗೆ
ಮರುಜನ್ಮದ ಉಸಿರಾಗಿ ನೀ ನಿಂತಿರುವೆ..!!

ಅಂದು ನಾನು ನಿನ್ನ ಪ್ರೀತಿ ಬಯಸಿ ಬಂದೆ
ನಾನೊಬ್ಬ ಸಾಮಾನ್ಯ ವ್ಯಕ್ತಿಯೆಂಬ ಕಾರಣಕ್ಕೆ
ಇಂದು ನೀನು ನನ್ನ ಮನದ ಬಾಗಿಲನ್ನೇ
ಶಾಶ್ವತವಾಗಿ ಮುಚ್ಚಿರುವ ನೆನಪು ಎಂದಿಗೂ
ನಾ ಮರೆಯಲಾಗದ ನೆನಪು..!!


Leave a Reply

Back To Top