ಕಾವ್ಯ ಸಂಗಾತಿ
ಗಾಯತ್ರಿ ಎಸ್ ಕೆ
ಗಜಲ್
ಕದಡುವೆ ಮನವ ಪ್ರೀತಿಯ ಒಲವ
ಕೊಡುವೆ ನಿನಗೆ ಮಧುರವಾದ ಮನವ
ಏನಿತು ಎಲ್ಲ ನಿನ್ನಲ್ಲಿ ಬಿಡದ ಭಾವವ
ಅರಿತು ಬಾಳುವ ಚಂದದಲ್ಲಿ ಬದುಕುವ
ಬಾಳ ಬದುಕು ನೂತನ ಸವಿಯುವ ಮಾಧುರ್ಯವ
ಎಲ್ಲ ಇರುವ ಇಲ್ಲಿ ಚಂದದ ಖುಷಿ ಹಂಚುವ
ಪ್ರೀತಿಯ ಜೀವನದ ನೈಜತೆ ಹೊಂದುವ
ಬಾಳಿಬದುಕುವ ಜಗತ್ತು ಸವಿಯುವ
ಎಲ್ಲವನೂ ಆದರಿಸುತ ಆರಾಧಿಸುವ
ಶುಭದಂತೆ ಎಲ್ಲ ಮನಸ್ಸಿನ ಭಾವವ
ಒಂದಾಗಿ ಬಾಳುತ ಜೀವನದ ಶುಭ ಕೋರುವ
ಮಾಧುರ್ಯ ನಮ್ಮಲ್ಲಿ ಒಲವ ತುಂಬುವ
ಗಾಯತ್ರಿ ಎಸ್ ಕೆ